ಕುಂಬಳೆ: ಕೇರಳ ಮಹಿಳಾ ಆಯೋಗ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಇಂದು(ಸೆ.19) ಬೆಳಿಗ್ಗೆ 10 ಗಂಟೆಗೆ ಕುಂಬಳೆ ಕಿದೂರು ಕುಂಟಂಗೇರಡ್ಕ ಸ್ವಾವಲಂಬಿ ಗ್ರಾಮದಲ್ಲಿ ನಡೆಯಲಿದೆ.
ಜಿಲ್ಲಾ ಪರಿಶಿಷ್ಟ ಜಾತಿ ಅಭೀವೃದ್ಧಿ ಇಲಾಖೆಯ ಸಹಕರದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿಮಹಿಳಾ ಸುರಕ್ಷೆ ಮತ್ತು ಮನೆಯ ವಾತಾವರಣ, ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ನೂತನ ಯೋಜನೆಗಳು ಎಂಬವಿಚಾರದ ಬಗ್ಗೆ ಬೆಳಕು ಚೆಲ್ಲಲಾಗುವುದು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಮಹಿಳಾ ಆಯೋಗ ಸದಸ್ಯೆ ಡಾ.ಷಾಹಿದಾ ಕಮಾಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿರುವರು. ನಂತರ ನಡೆಯುವ ವಿಚಾರಗೋಷ್ಠಿಯಲ್ಲಿ ಡಾ.ಷಾಹಿದಾ ಕಮಾಲ್ ಮತ್ತು ಕಾಸರಗೋಡು ಎಸ್.ಸಿ.ಡಿ.ಒ. ಬಶೀರ್ ಪಿ.ಬಿ. ಉಪನ್ಯಾಸ ಮಂಡಿಸುವರು.

