ಕಾಸರಗೋಡು: ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ನಡೆಸುವ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆಗೆ ಎಂಟ್ರಿ ಕೋರಲಾಗಿದೆ. ಇಲಾಖೆಯ www.forest.kerala.gov.in
ವೆಬ್ ಸೈಟ್ ಮೂಲಕ ಆನ್ ಲೈನ್ ಎಂಟ್ರಿ ಸಲ್ಲಿಸಬೇಕು. ವೈಲ್ಡ್ ಲೈಫ್ ಫೊಟೋಗ್ರಫಿ ಕಾಂಟೆಸ್ಟ್ 2019 ಎಂಬ ವಿಶೇಷ ಲಿಂಕ್ ಮೂಲಕ ಫೊಟೋಗಳನ್ನು ಅಪ್ ಲೋಡ್ ನಡೆಸಬೇಕು. ಒಬ್ಬರು ಗರಿಷ್ಠ 5 ಛಾಯಾಚಿತ್ರಗಳನ್ನು ಕಳುಹಿಸಬಹುದು. ಸೆ.30ರಂದು ಸಂಜೆ 5 ಗಂಟೆ ವರೆಗೆ ಫೊಟೋ ಅಪ್ ಲೋಡ್ ನಡೆಸಬಹುದು. ಮಾಹಿತಿ ಮತ್ತು ನಿಯಮಾವಳಿಗಾಗಿ ವೆಬ್ ಸೈಟ್ ಸಂದರ್ಶಿಸಬಹುದು.

