ಬದಿಯಡ್ಕ: ಎಸ್.ಎನ್.ಡಿ.ಪಿ. ನಾರಂಪಾಡಿ ಘಟಕದ ನೇತೃತ್ವದಲ್ಲಿ ಶ್ರೀ ನಾರಾಯಣ ಗುರುಜಯಂತಿ ಕಾರ್ಯಕ್ರಮದ ಅಂಗವಾಗಿ ಮಲ್ಲಮೂಲೆ ಎಸ್.ಎನ್.ಡಿ.ಪಿ.ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವನ್ನು ಕೊಟ್ಟನ್ ನಡುವಂಗಡಿ ಧ್ವಜಾರೋಹಣಗೈದು ಚಾಲನೆ ನೀಡಿದರು. ಕೃಷ್ಣ ಪಿ.ಮಲ್ಲಮೂಲೆ ದೀಪಜ್ವಲನೆಗೈದರು. ಸಮುದಾಯದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ರತೀಶ್ ನಡುವಂಗಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಗಂಗಾಧರನ್ ನೆಲ್ಲಿಯಡ್ಕ ಶುಭಾಶಂಸನೆಗೈದರು. ಕುಂಞÂಕಣ್ಣನ್ ಪಾವೂರು ಸ್ವಾಗತಿಸಿ, ಹರಿಪ್ರಸಾದ್ ನಡುವಂಗಡಿ ವಂದಿಸಿದರು. ಬಳಿಕ ಪಾಲ್ಗೊಂಡ ಎಲ್ಲರಿಗೂ ಪಾಯಸ ವಿತರಿಸಲಾಯಿತು.


