ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 2018-19ನೇ ವರ್ಷದ ಯೋಜನೆಯಲ್ಲಿ ಬದಿಯಡ್ಕ ನವಜೀವನ ಶಾಲೆಯಲ್ಲಿ ನಿರ್ಮಿಸಲಾದ ಹೆಣ್ಮಕ್ಕಳ ಶೌಚಾಲಯವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶುಕ್ರವಾರ ಉದ್ಘಾಟಿಸಿದರು. ಉಪಾಧ್ಯಕ್ಷೆ ಸೈಬುನ್ನೀಸಾ, ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಜೇಶ್ವರಿ, ಶಾಂತಾ, ಶಾಲಾ ಮುಖ್ಯೋಪಾಧ್ಯಾಯಿನಿ ಎಂ. ತಂಗಮಣಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಮುನಿಯೂರು, ಅಧ್ಯಾಪಕ ವೃಂದ, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


