HEALTH TIPS

ಭಾರತದ ಆರ್ಥಿಕ ನೀತಿಗಳಿಗೆ ಸಿಂಗಾಪುರ ಆಸರೆ ದೇಶವಾಗಿದೆ: ಎಸ್ ಜೈಶಂಕರ್

                 
     ಸಿಂಗಾಪುರ: ಭಾರತ ದೇಶದ ಆರ್ಥಿಕ ಮತ್ತು ವಾಣಿಜ್ಯ ನೀತಿಗಳಿಗೆ ಸಿಂಗಾಪುರ ಆಸರೆಯ ಸ್ಥಳವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
   ಅವರು ಸೊಮವಾರ ಸಿಂಗಾಪುರದಲ್ಲಿ ಸ್ಟಾರ್ಟ್ ಅಪ್ ಅಂಡ್ ಇನ್ನೋವೇಶನ್ ಎಕ್ಸಿಬಿಷನ್ ನ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ರಾಜಕೀಯವಾಗಿ, ಕಾರ್ಯತಂತ್ರವಾಗಿ, ಆರ್ಥಿಕ ಮತ್ತು ವಾಣಿಜ್ಯ ವಲಯಗಳಲ್ಲಿ ಸಿಂಗಾಪುರ ಭಾರತದ ನೀತಿಗಳಿಗೆ ಪ್ರಶಸ್ತ ಸ್ಥಳವಾಗಿದೆ. ಇಂದು ಆರಂಭವಾಗಿರುವ ದ್ವಿಪಕ್ಷೀಯ ಸಂಬಂಧ ಬಹಳ ದೊಡ್ಡದಾಗಿ ಬೆಳೆದಿದೆ. ನಿಯಮಗಳಾಧಾರಿತ ವಿಷಯಗಳಲ್ಲಿ ಭಾರತ ಮತ್ತು ಸಿಂಗಾಪುರ ಒಂದೇ ರೀತಿ ಯೋಚಿಸುತ್ತದೆ ಎಂದರು.
       ಭಾರತ ಸೇರಿದಂತೆ ವಿಶ್ವ ಬದಲಾಗುತ್ತಿರುವ ಸಂದರ್ಭದಲ್ಲಿ ಭಾರತ ಮತ್ತು ಸಿಂಗಾಪುರ ಒಟ್ಟೊಟ್ಟಿಗೆ ಸಾಗುತ್ತಿವೆ. ಭಾರತ ಹಣಪಾವತಿಯ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಗೆ ಸಿಂಗಾಪುರ ಹೆಗಲು ಕೊಟ್ಟಿದೆ. ಲುಕ್ ಈಸ್ಟ್ ಪಾಲಿಸಿಯಡಿ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಿಂಗಾಪುರ ಪ್ರಮುಖ ಸಹಭಾಗಿಯಾಗಿದೆ ಎಂದು ಹೇಳಿದರು. 1992ರಲ್ಲಿ ಭಾರತವು, ಭಾರತ-ಏಷಿಯಾ ಸಹಭಾಗಿತ್ವವನ್ನು ಆರಂಭಿಸಿದ್ದು, 2005ರಲ್ಲಿ ಈಸ್ಟ್ ಏಷಿಯಾ ಶೃಂಗಸಭೆಯ ಸದಸ್ಯರಾದೆವು. ಈ ಸಮಯದಲ್ಲಿ ಸಿಂಗಾಪುರ ಭಾರತದ ನೇರ ಹೂಡಿಕೆಯ ಮೂಲವಾಗಿತ್ತು. ಅದರ ಆರ್ಥಿಕ ಮಾರುಕಟ್ಟೆ ಮುಖ್ಯ ಮೂಲವಾಗಿತ್ತು. ವಿದೇಶಕ್ಕೆ ಹೋಗುವ ಭಾರತೀಯ ಕಂಪೆನಿಗಳಿಗೆ ಸಿಂಗಾಪುರ ಪ್ರಶಸ್ತ ಸ್ಥಳವಾಗಿದೆ. ಭಾರತದ ಹೂಡಿಕೆಯಲ್ಲಿ ಶೇಕಡಾ 20ರಷ್ಟು ಭಾಗ ಸಿಂಗಾಪುರದಿಂದ ಬಂದಿದ್ದು 9 ಸಾವಿರಕ್ಕೂ ಹೆಚ್ಚು ಭಾರತೀಯ ಕಂಪೆನಿಗಳು ಇಲ್ಲಿ ದಾಖಲಾಗಿವೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries