ಉಪ್ಪಳ: ಬಾಯಾರು ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ. 28 ಶನಿವಾರದಿಂದ ಅ.6 ಭಾನುವಾರದ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಯಲಿರುವುದು.
ಕಾರ್ಯಕ್ರಮಗಳ ಅಂಗವಾಗಿ ಪ್ರತಿದಿನ ಸಪ್ತಶತೀ ಪಾರಾಯಣ ಸೇವೆ, ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 10 ರಿಂದ ನವರಾತ್ರಿ ಪೂಜಾ ಸೇವೆ ನಡೆಯಲಿದೆ. ಅ. 2 ರಂದು ಬುಧವಾರ ಶ್ರೀಕ್ಷೇತ್ರದಲ್ಲಿ ಚಂಡಿಕಾ ಹೋಮ, ವಿಜಯದಶಮಿಯಂದು ಆಯುಧ ಪೂಜೆ ಹಾಗೂ ವಿದ್ಯಾದಶಮಿಯಂದು ವಿದ್ಯಾರಂಭ ನಡೆಯಲಿರುವುದು. ಭಕ್ತಾಭಿಮಾನಿಗಳು ಎಲ್ಲಾ ಕಾರ್ಯಕ್ರಮಕ್ಕೆ ತನು-ಮನ-ಧನಗಳಿಂದ ಸಹಕರಿಸಬೇಕಾಗಿ ಶ್ರೀಕ್ಷೇದ ವತಿಯಿಂದ ಕೋರಲಾಗಿದೆ.


