HEALTH TIPS

ಮತದಾನಹಕ್ಕು ಖಚಿತಪಡಿಸುವಿಕೆ

             
     ಕಾಸರಗೋಡು: 2019 ಜನವರಿ ಒಂದರಂದು ಪ್ರಕಟಿಸಿದ ಮತದಾತರ ಪಟ್ಟಿಯು ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಕರಡು ಮತದಾತರ ಪಟ್ಟಿಯಾಗಿರುವುದು. ನ್ಯಾಷನಲ್ ವೋಟರ್ಸ್ ಸರ್ವೀಸ್ ಪೋರ್ಟಲ್ (www.nvsp.in) ಎಂಬ ವೆಬ್ ಸೈಟ್ ಮೂಲಕ ಕ್ಷೆತ್ರದ ಮತದಾತರು ತಮ್ಮ ಮತದಾನದ ಹಕ್ಕಿನಖಚಿತತೆ ನಡೆಸಿಕೊಳ್ಳಬಹುದು. ಟೋಲ್ ಫ್ರೀ ನಂಬ್ರ 1950ಕ್ಕೆ ಕರೆಮಾಡಿಯೂ ಈ ಬಗ್ಗೆ ಮಾಹಿತಿ ಪಡೆಯಬಹುದು.
     212086 ಮತದಾತರು: 
     2019 ಜನವರಿ ಒಂದರಂದು ಪ್ರಕಟಿಸಿದ ಕರಡು ಪಟ್ಟಿಯ ಪ್ರಕಾರ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ106624 ಪುರುಷರು, 105462 ಮಹಿಳೆಯರೂ ಮತದಾರರಾಗಿದ್ದಾರೆ. ಒಟ್ಟು 212086 ಮತದಾರರು ಇದ್ದಾರೆ. ಮಂಜೇಶ್ವರ ಉಪಚುನಾವಣೆ ಸಂಬಂಧ 2019 ಸೆ.20 ವರೆಗೆ ಲಭಿಸಿರುವ ಅರ್ಜಿಗಳನ್ನು ಮಾತ್ರ ಪರಿಶೀಲಿಸಲಾಗುವುದು. ಆ ಪ್ರಕಾರ ನೂತನವಾಗಿ ಸೇರ್ಪಡೆಗೊಳ್ಳಲು 4533 ಅರ್ಜಿಗಳು, ಮತದಾತರ ಪಟ್ಟಿಯಿಂದ ಹೆಸರು ತೆರವುಗೊಳಿಸಲು 670 ಅರ್ಜಿಗಳೂ ಲಭಿಸಿವೆ. ಈ ಅರ್ಜಿಗಳನ್ನು ಪರಿಶೀಲಿಸಿ ಸೆ.30ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು. 
    ಚಟುವಟಿಕೆ ಆರಂಭಿಸಿದ ನಿಗಾ ತಂಡಗಳು:
   ಮಂಜೇಶ್ವರ ಉಪಚುನಾವಣೆಯ ಹಿನ್ನಲೆಯಲ್ಲಿ ಆಗಮಿಸಿರುವ ಮತದಾನ ಯಂತ್ರಗಳ ಪ್ರಾಥಮಿಕ ತಪಾಸಣೆ ಮಂಗಳವಾರ ನಡೆದಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ, ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ಇಂಜಿನಿಯರ್ ಗಳ ಸಮಕ್ಷದಲ್ಲಿ ತಪಾಸಣೆ ನಡೆಸಲಾಗಿದೆ. ಇದಕ್ಕೆ ಪೂರಕವಾ ಸೂಕ್ತ ಪ್ರಮಾಣದ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 
   ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆ ನಿರ್ಮಿಸಿರುವ ಎಂ.ತ್ರೀ.ವಿಭಾಗದ ಇ.ವಿ.ಎಂ., ವಿವಿಪಾಟ್ ಯಂತ್ರಗಳ , 400 ಬ್ಯಾಲೆಟ್ ಯೂನಿಟ್, 400 ಕಂಟ್ರೋಲ್ ಯೂನಿಟ್, 400 ವಿವಿಪಾಟ್ ಯಂತ್ರಗಳು ಇತ್ಯಾದಿಗಳು ಕೊಯಮತ್ತೂರಿನಿಂದ ಆಗಮಿಸಿವೆ. ಕಾರ್ಯಕಾರಿ ನ್ಯಾಯಮೂರ್ತಿ, ಸಶಸ್ತ್ರ ಪೊಲೀಸರ ಭದ್ರತೆಯೊಂದಿಗೆ ಇವನ್ನು ಜಿಲ್ಲಾಧಿಕಾರಿ ಕಚೇರಿಯ ದಾಸ್ತಾನುಗೃಹಕ್ಕೆ ತಲಪಿಸಲಾಗಿದೆ.   
     ನೋಡೆಲ್ ಅಧಿಕಾರಿಗಳ ನೇಮಕ:
   ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ 18 ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳ ಮೇಲ್ನೋಟದಲ್ಲಿ ವಿವಿಧ ನಿಗಾ ತಂಡಗಳು ಚಟುವಟಿಕೆನಡೆಸಲಿವೆ. ಸಾರ್ವಜನಿಕರಲ್ಲಿ ಮದರಿ ನೀತಿ ಸಂಹಿತೆ ಉಲ್ಲಂಘನೆ, ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ಫಲಕ ಸ್ಥಾಪನೆ ಸಹಿತ ದೂರುಗಳಿದ್ದಲ್ಲಿ ಸಿ-ವಿಜಿಲ್ ಎಂಬ ???ಪ್ ಮೂಲಕ ದೂರು ಸಲ್ಲಿಸಹುದು. ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪ್ರತ್ಯೇಕ ತಪಾಸಣೆಗಳು ನಡೆಯಲಿವೆ.
    ನಿಬಂಧನೆಗಳು:
     ಸ್ಪರ್ಧೆಗಿಳಿಯುವ ಅಭ್ಯರ್ಥಿಗಳು ಸೆಕ್ಯೂರಿಟಿ ಡೆಪಾಸಿಟ್ ರೂಪದಲ್ಲಿ ಹತ್ತು ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ-ಪಂಗಡದ ಮಂದಿ 5 ಸಾವಿರ ರೂ. ಠೇವಣಿಯಿರಿಸಬೇಕು. ರಾಷ್ಟ್ರೀಯ, ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬ ಪ್ರೊಪೋಸರ್, ನೋಂದಣಿ ನಡೆಸಿದ ಅಂಗೀಕೃತವಲ್ಲದ ರಾಜಕೀಯ ಪಕ್ಷಗಳ ಅಭ್ಯರ್ಥಿ ಮತ್ತು ಸ್ವತಂತ್ರ ಅಭ್ಯರ್ಥಿಗೆ 10 ಮಂದಿ ಪ್ರೊಪೋಸರ್ ಇರಬೇಕು. ಒಬ್ಬ ಅಭ್ಯರ್ಥಿ ಪ್ರಚಾರಕ್ಕಾಗಿ ಗರಿಷ್ಠ 28 ಲಕ್ಷ ರೂ. ವೆಚ್ಚಮಾಡಬಹುದು. ನಾಮಪತ್ರಿಕೆ ಸಲ್ಲಿಸುವ ವೇಳೆ ನಾಮಪತ್ರಿಕೆಯ ಏರಿಯಾದ 100 ಮೀಟರ್ ಸುತ್ತಳತೆಯಲ್ಲಿ ಅಭ್ಯರ್ಥಿಯ ವಾಹನ ಯಾ ಮೆರವಣಿಗೆ ಪ್ರವೇಶಿಸಬಾರದು. ಅಭ್ಯರ್ಥಿ ಸಹಿತ 5 ಮಂದಿ ಮಾತ್ರ ನಾಮಪತ್ರಿಕೆ ಏರಿಯಾಕ್ಕೆ ಪ್ರವೇಶಿಸಬಹುದಾಗಿದೆ. ಲಭಿಸಿದ ಪತ್ರಿಕೆಯ ಮಾಹಿತಿ ಆಯಾ ದಿನವೇ ವೆಬ್ ಸೈಟ್ ಗೆ ಅಪ್ ಲೋಡ್ ನಡೆಸಲಾಗುವುದು. secretary@kkvib.org,   iokkvib@gmail.com,   io@kkvib.org ಎಂಬ ವೆಬ್ ಸೈಟ್ ಮೂಲಕ ಶೋಧಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries