ಉಪ್ಪಳ: ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಗುರುವಾರ ಹಾಗೂ ಶುಕ್ರವಾರ ಜರಗಿತು. ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಧ್ವಜಾರೋಹಣಗೈದು ಗೌರವವಂದನೆ ಸ್ವೀಕರಿಸಿದರು. ಮಂಜೇಶ್ವರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಬಹುಮಾನ ವಿತರಿಸಿದರು. ಎರಡು ದಿನಗಳಲ್ಲಾಗಿ ನಡೆದ ಕೂಟದಲ್ಲಿ ಸುಮಾರು 700ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಗಳನ್ನು ತೋರ್ಪಡಿಸಿದರು. ಕ್ರೀಡಾ ಶಿಕ್ಷಕ ಕೆ.ಎಂ. ಬಲ್ಲಾಳ್, ಕಾರ್ಯಕ್ರಮ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಎಂ.ಎಸ್. ಉಪಸ್ಥಿತರಿದ್ದರು.
ಪೈವಳಿಕೆನಗರ ಶಾಲೆಯಲ್ಲಿ ಶಾಲಾ ಕ್ರೀಡೋತ್ಸವ
0
ಸೆಪ್ಟೆಂಬರ್ 27, 2019