ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಬಳಗ ಸೂರಾಲು, ಬ್ರಹ್ಮಾವರ, ಉಡುಪಿ, ಇವರು ನಡೆಸುತ್ತಿರುವ ಜ್ಞಾನ ಯಜ್ಞ ಸಂಚಾರಿ ತಾಳಮದ್ದಳೆ 2019 ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕೂಟ " ಬಿಲ್ಲಹಬ್ಬ ಕಂಸವಧೆ " ಜರಗಿತು.
ಭಾಗವತರಾಗಿ ವಾಮದೇವ ಪುಣಿಂಚಿತ್ತಾಯ, ಡಾ.ರವಿಕುಮಾರ್ ಸೂರಾಲು, ಮದ್ದಳೆಯಲ್ಲಿ ರಾಮಚಂದ್ರ ಪುಣಿಂಚಿತ್ತಾಯ, ಶಂಕರ ಆಚಾರ್ಯ ಗುಡ್ರಿ, ವಿಜಯ ನೀಲ್ಜೆಡ್ಡು ಇವರು ಭಾಗವಹಿಸಿದರು.
ಮುಮ್ಮೇಳ ಕಲಾವಿದರಾಗಿ ಪೂಕಳ ಲಕ್ಷ್ಮೀನಾರಾಯಣ ಭಟ್, ನಿಟ್ಟೂರು ಅನಂತ ಹೆಗಡೆ, ಅಪ್ಪಕುಂಞÂ್ಞ ಮಣಿಯಾಣಿ ಮಿಂಚಿಪದವು, ಸುಬ್ರಹ್ಮಣ್ಯ ಬೈಪಡಿತ್ತಾಯ ಸಹಕರಿಸಿದರು. ಪೂಕಳ ಲಕ್ಷ್ಮೀ ನಾರಾಯಣ ಭಟ್ ಸ್ವಾಗತಿಸಿ, ಅಡ್ಕ ಸುಬ್ರಹ್ಮಣ್ಯ ಭಟ್ ವಂದಿಸಿದರು. ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮಾಡಿದರು.


