ಪೆರ್ಲ: ಎಣ್ಮಕಜೆ ಗ್ರಾ.ಪಂ.ನ ಬಣ್ಪುತ್ತಡ್ಕ ಸಮೀಪದ ರಂಗೋಚಿ ಎಂಬಲ್ಲಿನ ಪರಿಶಿಷ್ಟ ಜಾತಿ ಕುಟುಂಬವೊಂದಕ್ಕೆ ಕಾಸರಗೋಡಿನ ಚೈಲ್ಡ್ ಲೈನ್ ಅಧಿಕಾರಿಗಳು ನಿತ್ಯೋಪಯೋಗಿ ಸಾಮಾಗ್ರಿಗಳನ್ನು ಬುಧವಾರ ಹಸ್ತಾಂತರಿಸಿದರು. ಇಲ್ಲಿನ ಸಂಜೀವ ಎಂಬವರು ಕ್ಷಯರೋಗ ಪೀಡಿತರಾಗಿ ಅಸು ನೀಗುವುದರೊಂದಿಗೆ ಇವರ ಪತ್ನಿ, ಮಗಳು ಹಾಗೂ ತಾಯಿ ನಿರ್ಗತಿಕರಾಗಿದ್ದರು. ಈ ಮಧ್ಯೆ ಇವರ ಮನೆಯು ಕಳೆದ ಜುಲೈ ತಿಂಗಳಲ್ಲಿ ಬೀಸಿದ ಗಾಳಿ ಮಳೆಗೆ ಸಂಪೂರ್ಣ ಧರಶಾಯಿಯಾಗಿದ್ದು, ಸಂಜೀವರ ತಾಯಿ ಚೋಮಾರು, ಪತ್ನಿ ಲಕ್ಷ್ಮಿ, ಮಗಳು ವಿನುತಾ ಮನೆ ಪಕ್ಕದಲ್ಲಿ ಟರ್ಪಾಲು ಹಾಸಿದ ಗುಡಿಸಲೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಇದೀಗ ಇವರೆಲ್ಲರ ಆಧಾರವಾಗಿದ್ದ ಸಂಜೀವರು ಮರಣವನ್ನಪ್ಪುದರೊಂದಿಗೆ ಸಂಸಾರದ ಪರಿಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ತಲುಪಿತ್ತು. ವಯೋವೃದ್ದೆಯಾದ ಚೋಮಾರು ಹಾಗೂ ಲಕ್ಷ್ಮಿಯ ಜೊತೆ ವಿದ್ಯಾರ್ಥಿನಿಯಾದ ವಿನುತಾಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಪ್ರಾಥಮಿಕ ಸೌಲಭ್ಯಕ್ಕೆ ಶೌಚಾಲಯ ಕೂಡ ಇಲ್ಲದೆ ಬಟ್ಟೆಗಳನ್ನು ಕಟ್ಟಿ ಶೌಚ ನಿರ್ವಹಿಸಬೇಕಾದ ದುಸ್ಥಿತಿ ಇವರದ್ದಾಗಿದೆ. ಈ ಬಡ ಕುಟುಂಬದ ಪರಿಸ್ಥಿತಿ ವಿವಿಧ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಇದನ್ನು ಅರಿತು ಸ್ಥಳ ಸಂದರ್ಶಿಸಿ ಚೈಲ್ಡ್ ಲೈನ್ ನ ಸಂಯೋಜನಾಧಿಕಾರಿ ಉದಯ ಎಂ., ಕಾರ್ಯಕರ್ತರಾದ ಆನಂದ ಮೆಣಸಿನಪಾರೆ, ಪರಿಶಿಷ್ಟ ಕ್ಷೇಮ ಸಮಿತಿ ಕಾರ್ಯಕರ್ತ ಆನಂದ ಕುಕ್ಕಿಲ ಮೊದಲಾದವರು ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.
ಬಣ್ಪುತ್ತಡ್ಕದ ಪರಿಶಿಷ್ಟ ಜಾತಿ ಕುಟುಂಬಕ್ಕೆ ಚೈಲ್ಡ್‍ಲೈನ್ ನಿಂದ ಆಹಾರ ಸಾಮಾಗ್ರಿ ವಿತರಣೆ
0
ಸೆಪ್ಟೆಂಬರ್ 26, 2019