HEALTH TIPS

ಮಂಗಳೂರು: ಪಕ್ಕದ ಮನೆಯ ಆವರಣಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

         
        ಮಂಗಳೂರು: ಪಕ್ಕದ ಮನೆಯ ಆವರಣ ಗೋಡೆ ಕುಸಿದು ಅವಶೇಷಗಳಡಿ ಸಿಲುಕು ಇಬ್ಬರು ಮಕ್ಕಳು ಮೃತಪಟ್ಟ ಕರುಣಾಜನಕ ಘಟನೆ ಇಲ್ಲಿನ ಪಡೀಲ್ ಸಮೀಪದ ಶಿವನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
      ರಾಮಚಂದ್ರ ಹಾಗೂ ರಜನಿ ದಂಪತಿಗಳ ಮಕ್ಕಳಾದ ವೇದಾಂತ್ ( 7 )ಮತ್ತು ವರ್ಷಿಣಿ( 8 ) ಮೃತಪಟ್ಟ ಮಕ್ಕಳು. ನಿನ್ನೆ ಸಂಜೆಯಿಂದ ನಗರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಭಾರೀ ಮಳೆಗೆ 20 ಅಡಿ ಎತ್ತರದ ಈ ಆವರಣ ಗೋಡೆ ಕುಸಿದಿದೆ. ಈ ವೇಳೆ ಮಕ್ಕಳು ಮನೆಯೊಳಗಡೆ ಓದುತ್ತಿದ್ದರು. ದುರ್ಘಟನೆ ನಡೆಯುವಾಗ ತಂದೆ ತಾಯಿ ಮನೆಯ ಹೊರಗಿದ್ದರು ಎನ್ನಲಾಗಿದೆ.
      ಈ ಸಂಬಂಧ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries