ಕುಂಬಳೆ: ಅಖಿಲ ಭಾರತ ಕೋಟೆಯಾರ್ ಸಂಘದ ಆಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪಿಡಿಸಿ ಮತ್ತು ಉನ್ನತ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಗಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅ.2 ರಂದು ಬೆಳಿಗ್ಗೆ 10 ರಿಂದ ಕುಂಬಳೆ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪರಿಸರದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಸೆ.28 ರ ಮೊದಲು ವಿದ್ಯಾರ್ಥಿಗಳು ಗಳಿಸಿದ ಅಂಕಗಳ ನಕಲಿ ಪ್ರತಿ ಸಹಿತ ಅರ್ಜಿಯನ್ನು ಕೆ.ಸೀತಾರಾಮ ಮಂಗಳೂರು(8762284321) ಮತ್ತು ತಾರಾನಾಥ ಮಧೂರು (9447211180) ಅವರಿಗೆ ಸಲ್ಲಿಸಬೇಕು. ಈ ಕುರಿತು ನಡೆದ ಸಭೆಡಯಲ್ಲಿ ದಾಮೋದರ ಸೂರ್ಲು ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ತಾರಾನಾಥ ಮಧೂರು ಕಾರ್ಯಕ್ರಮದ ರೂಪುರೇಷೆ ನೀಡಿದರು. ದಿವಾಕರ ಅಶೋಕನಗರ, ವರುಣ್ ಕುಮಾರ್, ಲಕ್ಷ್ಮೀ, ಶ್ವೇತಾ ಮೊದಲಾದವರು ಮಾತನಾಡಿದರು.

