ಉಪ್ಪಳ: ಉಪ್ಪಳದಲ್ಲಿರುವ ಮಂಜೇಶ್ವರ ಉಪಜಿಲ್ಲಾ ಬ್ಲಾಕ್ ಸಂಪನ್ಮೂಲ ಕೇಂದ್ರ(ಬಿ ಆರ್ ಸಿ) ನೇತೃತ್ವದಲ್ಲಿ ಓಣಂ ಗೆಳೆಯರ ಕೂಟದ ಕಾರ್ಯಕ್ರಮದ ಭಾಗವಾಗಿ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿಶೇಷ ಚೇತನ ಮಗುವಾದ ಇಬ್ರಾಹಿಂ ಅಝಮ್ ಮನೆಗೆ ಭೇಟಿ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಗ್ರಾಮಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಅಧ್ಯಕ್ಷತೆ ವಹಿಸಿದ್ದರು. ಮನೆಯಲ್ಲಿ ಹೂ ರಂಗೋಲಿ ಹಾಕಲಾಯಿತು. ಮಗುವಿಗೆ ಓಣಂ ಕಿಟ್, ವಸ್ತ್ರ, ಓಣಂ ಭೋಜನ, ಪುಸ್ತಕ ಮೊದಲಾದವುಗಳನ್ನು ನೀಡಲಾಯಿತು. ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ.ಆರ್, ಶಶಿಕಲ.ಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ, ಕೆ.ಎಂ. ಬಲ್ಲಾಳ್, ವತ್ಸಲ, ರೈನ ಇವೆಟ್ ಡಿಸೋಜ, ಪ್ರವೀಣ್ ಕನಿಯಾಲ ಉಪಸ್ಥಿತರಿದ್ದರು. ಬಿ ಆರ್ ಸಿ ವಿಕಲಚೇತನ ಮಕ್ಕಳ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀಪ್ರಿಯ ಸರಳಾಯ ಸ್ವಾಗತಿಸಿ, ತರಬೇತುದಾರ ಗುರುಪ್ರಸಾದ್ ರೈ ವಂದಿಸಿದರು.

