ಉಪ್ಪಳ: ಐಶು ಇಂಡೆನ್ ಗ್ರಾಮೀಣ ವಿತರಕ್ ಬಾಯಾರ್‍ಪದವು ಆಶ್ರಯದಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತ ಗ್ಯಾಸ್‍ಸಿಲಿಂಡರ್ ವಿತರಣೆ ಮತ್ತು ಎಲ್‍ಪಿಜಿ ಸೇಫ್ಟಿ ಕ್ಲಿನಿಕ್ ಇತ್ತೀಚೆಗೆ ಬಾಯಾರುಪದವಿನಲ್ಲಿ ನಡೆಯಿತು.
ಸುಮಾರು 45ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಗ್ಯಾಸ್‍ಸ್ಟವ್ ಮತ್ತು ಸಿಲಿಂಡರ್ ಉಚಿತವಾಗಿ ವಿತರಿಸಲಾಯಿತು. ಅಗ್ನಿಶಾಮಕದಳದ ಉನ್ನತ ಅಧಿಕಾರಿಗಳು ಅಡುಗೆ ಅನಿಲ ಸುರಕ್ಷಾ ಉಪಯೋಗದ ಬಗ್ಗೆ ಮಾಹಿತಿ ನೀಡಿ, ತುರ್ತುಪರಿಸ್ಥಿತಿಯಲ್ಲಿ ಸುರಕ್ಷಾ ಕ್ರಮದ ಪ್ರಾತ್ಯಕ್ಷಿಕೆ ನೀಡಿದರು.
ಪೈವಳಿಕೆ ಗ್ರಾ.ಪಂ. ಪ್ರತಿನಿಧಿ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಜಂಕಿಲ ವಾರ್ಡ್ ಪ್ರತಿನಿಧಿ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲ ಯೋಜನೆಯನ್ನು ಪ್ರತಿ ಮನೆಮನೆಗೆ ತಲುಪಿಸುವ ಕಾರ್ಯವನ್ನು ಐಶು ಇಂಡೇನ್ ಗ್ರಾಮೀಣ ವಿತ್ರಕ್ ಮಾಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು. ಪ್ರಶಾಂತ್ ಸ್ವಾಗತಿಸಿ, ಯೋಗೀಶ್ ವಂದಿಸಿದರು. ಸದಾನಂದ ಚಿಪ್ಪಾರ್ ಕಾರ್ಯಕ್ರಮ ನಿರೂಪಿಸಿದರು.


