ಬದಿಯಡ್ಕ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಏತಡ್ಕ ವಲಯ ಸಮಿತಿಯ ಮಹಿಳಾ ಘಟಕದ ಆಶ್ರಯದಲ್ಲಿ ಗೋಸಾಡ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಉಪಾಕರ್ಮ ಕಾರ್ಯಕ್ರಮವು ವೇದಮೂರ್ತಿ ಮಾಧವ ಶರ್ಮ ಹಾಗೂ ಆದಿನಾರಾಯಣ ಇವರ ನೇತೃತ್ವದಲ್ಲಿ ನಡೆಯಿತು. ನೂತನ ವಟುಗಳು ಹಾಗೂ ಹಿರಿಯರು ಉಪಾಕರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಓಣಂ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅರವಿಂದ ಕುಮಾರ್ ಅಲೆವೂರಾಯ, ಸೀತಾರಾಮ ಕುಂಜತ್ತಾಯ, ಪಾರ್ವತಿ ಕುಂಜತ್ತಾಯ ಮೊದಲಾದವರು ಭಾಗವಹಿಸಿದ್ದರು.
ಸಾಮೂಹಿಕ ಉಪಾಕರ್ಮ ಸಂಪನ್ನ
0
ಸೆಪ್ಟೆಂಬರ್ 13, 2019