ಮಂಜೇಶ್ವರ: ಜಿಲ್ಲಾಡಳಿತೆ, ಮಂಜೇಶ್ವರ ಬ್ಲಾ.ಪಂ. ಹಾಗೂ ಜಿಲ್ಲಾ ಪ್ರವಾಸೋಧ್ಯಮ ಪ್ರಚಾರ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಮಂಜೇಶ್ವರ ಬ್ಲಾಕ್ ಪಂಚಾಯತಿ ಕಾರ್ಯಲಯದಲ್ಲಿ ಓಣಂ ಆಚರಣೆ ನಡೆಯಿತು.
ಮಂಜೇಶ್ವರ ಬ್ಲಾ.ಪಂ.ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಸಮಾರಂಭವನ್ನು ಉದ್ಘಾಟಿಸಿದರು. ಬ್ಲಾ.ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಹೂರಂಗೋಲಿ(ಪೂಕಳಂ)ಸ್ಪರ್ಧೆಯನ್ನು ಮಂಜೇಶ್ವರ ಚರ್ಚ್ ಧರ್ಮಗುರು ವಿನ್ಸೆಂಟ್ ವಿನೋದ್ ಸಲ್ದಾನ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಬ್ಲಾ.ಪಂ.ಸದಸ್ಯರು, ಮಂಜೇಶ್ವರ ತಹಶೀಲ್ದಾರ್ ರಝಿ ಜೋನ್, ಜಿಲ್ಲಾ ಪ್ರವಾಸೋಧ್ಯಮ ಇಲಾಖೆಯ ಬಿಜು, ಬ್ಲಾ.ಪಂ. ಅಭಿವೃದ್ದಿ ಅಧಿಕಾರಿ ನೂತನಕುಮಾರಿ, ಸಾಮಾಜಿಕ ಕಾರ್ಯಕರ್ತ ಸೈಪುಲ್ಲಾ ತಂಙಳ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ ರಘು ಭಟ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪೂಕಳಂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಾವೇಲಿ ವೇಶಧಾರಿ ಗಮನ ಸೆಳೆದರು. ಜಿಲ್ಲಾ ಪ್ರವಾಸೋಧ್ಯಮ ಇಲಾಖೆಯ ಬಿಜು ಸ್ವಾಗತಿಸಿ, ತಹಶೀಲ್ದಾರ್ ರಝಿ ಜೋನ್ ವಂದಿಸಿದರು. ಬಳಿಕ ಓಣಂ ಭೋಜನ ನಡೆಯಿತು.

