HEALTH TIPS

ತ್ರಿದಿನ ಆವಾಸೀಯ ಶಿಬಿರ ಸಮಾರೋಪ


          ಕುಂಬಳೆ:  ಮಂಜೇಶ್ವರ ಉಪಜಿಲ್ಲಾಮಟ್ಟದ ಮೂರುದಿನಗಳ ಆವಾಸೀಯ ಸಂಸ್ಕøತ ಶಿಬಿರ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಸೋಮವಾರ ಸಮಾಪ್ತಿಗೊಂಡಿತು.
        ಬೆಳಿಗ್ಗಿನಿಂದ ರಾತ್ರಿ ವರೆಗೆ ವಿವಿಧ ಮಜಲುಗಳಲ್ಲಿ ಸಂಸ್ಕøತಕ್ಕೆ ಸಂಬಂಧಪಟ್ಟ ಪ್ರಾಯೋಗಿಕ ಚಟುವಟಿಕೆಗಳಾದ ಪ್ರಾತಃಕಾಲದ ಸ್ಮರಣೆ, ಯೋಗ, ಸುಭಾಷಿತ, ಶುಚಿತ್ವ, ಶಿಬಿರಗೀತೆ, ಶಿಬಿರಬಿಂದುಗಳ ಅಭಿನಯಪೂರ್ವ ತರಬೇತಿ, ಸಂಜೆ ವೇಳೆ ಬೌದ್ಧಿಕ ಹಾಗೂ ಶಾರೀರಿಕ ಕ್ರೀಡೆ, ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ನಾಟಕ, ಶಿಬಿರದ ಸಂಸ್ಕøತ ಅಧ್ಯಾಪಕರ ಪ್ರಹಸನ, ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕಲಾಪ್ರದರ್ಶನ ನಡೆಯಿತು.
        ಈ ಬಾರಿಯ ಶಿಬಿರದಲ್ಲಿ ಶಾಲೆಯ ಸ್ಥಳೀಯ ಪ್ರದೇಶದಲ್ಲಿನ ವಿಚಾರಗಳನ್ನು ಸ್ಥೂಲವಾಗಿ ಪರಿಚಯಿಸಲಾಯಿತು.
         ಶಿಬಿರದ ಸಮಾರೋಪ ಸಮಾರಂಭವನ್ನು ಪುತ್ತಿಗೆ ಗ್ರಾಮ ಪಂಚಾಯಿತಿ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷ ಚನಿಯ ಪಾಡಿ ಉದ್ಘಾಟಿಸಿ, ಆವಾಸೀಯ ಶಿಬಿರವು ವಿದ್ಯಾರ್ಥಿಗಳಲ್ಲಿ ಬೆರೆಯುವ ಸಹಕಾರ ಮನೋಭಾವವನ್ನು ಬೆಸೆಯುತ್ತದೆ ಎಂದರು.
       ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ ರೈ ಪಾರಿಂಜ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕøತ ಅಕಾಡಮಿಕ್ ಕೌನ್ಸಿಲ್ ಮಂಜೇಶ್ವರದ ಉಪಾಧ್ಯಕ್ಷೆ ಅರುಣಾ ಜೆ., ಧರ್ಮತ್ತಡ್ಕ ವಿದ್ಯಾಸಂಸ್ಥೆಯ ವ್ಯವಸ್ಥಾಪಕಿ ಶಾರದಮ್ಮ, ಧರ್ಮತ್ತಡ್ಕ ಹಿರಿಯ ಪ್ರಾಥಮಿಕ ಶಾಲಾ ವ್ಯವಸ್ಥಾಪಕಿ ವಿಜಯಶ್ರೀ ಬಿ., ಶಾಲೆಯ ಮಾತೃ ಮಂಡಳಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ನಸೀಮ, ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ, ಮಂಜೇಶ್ವರ ಉಪಜಿಲ್ಲೆಯ ಮುಖ್ಯಶಿಕ್ಷಕ ಸಮಿತಿಯ ಕಾರ್ಯದರ್ಶಿ ಆದಿನಾರಾಯಣ ಭಟ್ ಮತ್ತಿತರರು ಮಾತನಾಡಿದರು. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಎನ್. ಮಹಾಲಿಂಗ ಭಟ್ ಸ್ವಾಗತಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries