ಕುಂಬಳೆ: ತುಳುನಾಡಿನ ವೈವಿಧ್ಯಮಯ ಆಚರಣೆ, ಜೀವನ ಕ್ರಮಗಳು ವಿಶಿಷ್ಟವಾಗಿ ಪ್ರಕೃತಿ-ಜೀವಗಳು ಪರಸ್ಪರ ನಿಕಟತೆಯಿಂದ ಬದುಕುವ ಪರಂಪರೆ ಇರುವುದಾಗಿದೆ. ಇಲ್ಲಿಯ ಹಬ್ಬಾಚರಣೆಗಳು ಋತುಮಾನಕ್ಕೆ ಅನುಗುಣವಾಗಿ ಹೃದಯ ಶ್ರೀಮಂತಿಕೆಯ ಸುಖಮಯ ಪುಣ್ಯ ನೆಲವಾಗಿ ಪರಿಗಣಿಸಲ್ಪಟ್ಟಿರುವಂತದ್ದು ಎಂದು ಖ್ಯಾತ ವಾಗ್ಮಿ, ಶಿಕ್ಷಕಿ ಆಶಾ ದಿಲೀಪ್ ರೈ ಸುಳ್ಯಮೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಸಹಯೋಗದೊಂದಿಗೆ ಬಂಟ್ಸ್ ಸರ್ವಿಸ್ ಸೋಸೈಟಿ ಕುಂಬಳೆ ಫಿರ್ಕಾ, ಬಂಟರ ಸಂಘ ಕುಂಬಳೆ, ಯುವ ಬಂಟ್ಸ್ ಕುಂಬಳೆ, ಮಹಿಳಾ ಬಂಟರ ಸಂಘ ಕುಂಬಳೆ ಇವರ ನೇತೃತ್ವದಲ್ಲಿ ಬಂಬ್ರಾಣದ ಶ್ರೀಕ್ಷೇತ್ರ ಅಬಿಂಲಡ್ಕದಲ್ಲಿ ಭಾನುವಾರ ನಡೆದ ತುಳುನಾಡ ಪರ್ಬ ವಿಶೇಷ ಸಮಾರಂಭದಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
ಕುಂಬಳೆ ಫಿರ್ಕಾ ಬಂಟ್ಸ್ ಸರ್ವಿಸ್ ಸೋಸೈಟಿ ಅಧ್ಯಕ್ಷ ವಳಮಳೆ ಪದ್ಮನಾಭ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ, ಮಂಗಳೂರಿನಲ್ಲಿರುವ ಮಾತೃಸಂಘದ ಇತ್ತೀಚೆಗಿನ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದರು. ಸಮಾರಂಭದಲ್ಲಿ ಖ್ಯಾತ ಹಿಮ್ಮೇಳ ಯಕ್ಷಗಾನ ಕಲಾವಿದ ಕೆಳಗಿನ ಉಜಾರ್ ಮಹಾಬಲ ಶೆಟ್ಟಿ ಪಟ್ಲಗುತ್ತು ಮತ್ತು ಜಾನಪದ ವಿದ್ವಾಂಸ ಇತಿಹಾಸತಜ್ಞ ಲೇಖಕ ಕೇಶವ ಶೆಟ್ಟಿ ಆದೂರು ಅವರನ್ನು ಸನ್ಮಾನಿಸಲಾಯಿತು ಸಮಾರಂಭದಲ್ಲಿ ಬಂಟರ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ, ಆಶಾಜ್ಯೋತಿ ರೈ ಬಂಬ್ರಾಣ, ಕೋಳಾರು ಸತೀಶ್ಚಂದ್ರ ಭಂಡಾರಿ, ಅರಿಬೈಲು ಗೋಪಾಲ್ ಶೆಟ್ಟಿ, ನ್ಯಾಯವಾದಿ ಶಿವರಾಂ ಆಳ್ವ ಕಾರಿಂಜ, ಚಂದ್ರಹಾಸ ರೈ ಪೆರಡಾಲ ಗುತ್ತು, ಮುಕ್ತಾನಂದ ರೈ, ರಾಜೇಶ್ ಶೆಟ್ಟಿ ಕೋಟೆಕ್ಕಾರು, ಪುಷ್ಪ ಶೆಟ್ಟಿ ಕಾಜೂರು ಮುಂತಾದವರು ಶುಭಹಾರೈಸಿದರು.
ಸಮಾರಂಭದಲ್ಲಿ ಇತ್ತೀಚಿಗೆ ಮೃತಪಟ್ಟ ಶಿವರಾಮ ಶೆಟ್ಟಿ ಹೊಸಮನೆ ಎಂಬವರ ಕುಟುಂಬಕ್ಕೆ ಫಿರ್ಕಾ ಮತ್ತು ಪಂಚಾಯಿತಿನ ಬಂಟರ ಸಂಘಗಳ ಸಹಯೋಗದೊಂದಿಗೆ ಮತ್ತು ಅಜಿತ್ ಕುಮಾರ್ ರೈ ಮಾಲಾಡಿಯವರ ವೈಯಕ್ತಿಕ ನೆರವಿನೊಂದಿಗೆ ಸಹಾಯ ಧನವನ್ನು ವಿತರಿಸಲಾಯಿತು.
ಬೆಳಿಗ್ಗಿನಿಂದ ಅಂಬಿಲಡ್ಕ ಕ್ಷೇತ್ರದ ವಠಾರದಲ್ಲಿ ನಡೆದ ಎಲ್ಲಾ ವಯೋಮಿತಿಯ ಬಂಟ ಸಮುದಾಯದ ಕ್ರೀಡಾಕೂಟ ಹಾಗೂ ಅಕ್ಟೋಬರ್ 27ರಂದು ನಡೆದ ಬಂಟ್ಸ್ ಪ್ರೀಮಿಯರ್ ಲೀಗ್ ಬಲೀಂದ್ರ ಕಪ್ 2019 ಇದರ ಪುರಸ್ಕಾರಗಳನ್ನು ನೀಡಲಾಯಿತು.
ಇತ್ತೀಚೆಗೆ ಯಶಸ್ವಿಯಾಗಿ ನಡೆದ ಪ್ರೀಮಿಯರ್ ಲೀಗ್ ಬಲೀಂದ್ರ ಕಪ್ 2019 ವಿಜೇತರಾದ ಬಂಟ್ಸ್ ಬಂಬ್ರಾಣ ಮಾಲೀಕರಾದ ರವಿ ಶೆಟ್ಟಿ ಉಜಾರ್ ಮತ್ತು ರತ್ನಾಕರ ರೈ ಬಟ್ಟೆಕಲ್ಲು ಮತ್ತು ರಾಯಲ್ ಬಂಟ್ಸ್ ಮಾಲಕ ಹರೀಶ್ ಆಳ್ವ ಉಜಾರ್, ರಾಧಾಕೃಷ್ಣ ಶೆಟ್ಟಿ ಬಳ್ಳೂರು, ಶಿವರಾಮಶೆಟ್ಟಿ ಬಳ್ಳೂರು ಮತ್ತು ವ್ಯವಸ್ಥಾಪಕ ಗಣೇಶ್‍ನಂದು ರೈ ಪ್ರಶಸ್ತಿಗಳನ್ನು ಪಡೆದುಕೊಂಡರು.
"ಕುಂಬಳೆ ಗಾಂಧಿ" ಬಂಬ್ರಾಣ ಬೈಲು ದೇವಪ್ಪ ಆಳ್ವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಕುಂಬಳೆ ಪಂಚಾಯತಿ ಬಂಟರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕ್ಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ಕೆಳಗಿನ ಬೈಲು ಲೋಕನಾಥ ಶೆಟ್ಟಿ ವಂದಿಸಿದರು. ಹರ್ಷಕುಮಾರ್ ರೈ ಬೆಳಿಂಜ ಅವರು ಕ್ರೀಡಾ ಮತ್ತು ಸಭಾ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ಆಳ್ವ ಕಳತ್ತೂರು, ಶಿವರಾಮ ಶೆಟ್ಟಿ ಕಿದೂರು, ಪ್ರೇಮಾ ಶೆಟ್ಟಿ ಕಂಚಿಕಟ್ಟೆ ಮತ್ತು ಶಕೀಲಾ ಶೆಟ್ಟಿ ಕ್ರೀಡಾ ಸ್ಪರ್ಧೆಗಳು ನಡೆಸಲು ಸಹಕರಿಸಿದರು.



