HEALTH TIPS

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ''ಟರ್ಮಿನೇಟರ್'' ಗೊತಬಯಗೆ ಗೆಲುವು

   
    ಕೊಲಂಬೋ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರು ಎದುರಾಳಿ, ಮಾಜಿ ರಕ್ಷಣಾ ಕಾರ್ಯದರ್ಶಿ ಗೊತಬಯ ರಾಜಪಕ್ಸಾ ವಿರುದ್ಧ ಸೋಲು ಅನುಭವಿಸಿದ್ದಾರೆ. ಟರ್ಮಿನೇಟರ್ ಗೋತಬಯ ಹಾಗೂ ಪ್ಯಾಡ್ ಮ್ಯಾನ್ ಸಜಿತ್ ನಡುವಿನ ನೇರ ಹಣಾಹಣಿಯಲ್ಲಿ ಗೋತಬಯಕ್ಕೆ ಗೆಲುವು ಲಭಿಸಿದ್ದು, ಶ್ರೀಲಂಕಾದ 7ನೇ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ. ರಾಜಪಕ್ಸಾ ಅವರಿಗೆ 49.6% ಶೇಕಡಾವಾರು ಮತಗಳು ಬಂದಿದ್ದರೆ, ಪ್ರೇಮದಾಸ ಅವರರಿಗೆ 44.4 ಶೇಕಡಾವಾರು ಮತಗಳು ಲಭ್ಯವಾಗಿದೆ.
     ಸುಮಾರು 12,845 ಮತಗಟ್ಟೆಗಳಲ್ಲಿ 1.60 ಕೋಟಿ ಮತದಾರರ ಪೈಕಿ ಶೇ 80 ರಷ್ಟು ಮಂದಿ ಶನಿವಾರದಂದು ಮತದಾನ ಮಾಡಿದ್ದರು. ಮತದಾನದ ವೇಳೆ ಅನೇಕ ಕಡೆಗಳಲ್ಲಿ ಹಿಂಸಾಚಾರ, ಗಲಭೆ ಪ್ರಕರಣಗಳು ವರದಿಯಾಗಿವೆ. ಆದರೆ ಸ್ವತಂತ್ರ, ಮುಕ್ತ ಚುನಾವಣೆ ನಡೆಸಲಾಗಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
     ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಗೋತಬಯ ರಾಜಪಕ್ಸಾ(70 ವರ್ಷ) ಅವರು ತಮಿಳು ಪ್ರತ್ಯೇಕತಾವಾದಿ ಹೋರಾಟವನ್ನು ಹತ್ತಿಕೊಳ್ಳಲು ಶ್ರಮಿಸಿದ್ದರು. ಅವರ ಸೋದರ ಮಹಿಂದ ರಾಜಪಕ್ಸಾ ಈ ಮುಂಚೆ ಅಧ್ಯಕ್ಷರಾಗಿದ್ದರು. ಕುಟುಂಬಸ್ಥರು, ಆಪ್ತ ಬಳಗದವರಿಗೆ ಟರ್ಮಿನೇಟರ್ ಎಂದೇ ಕರೆಸಿಕೊಳ್ಳುತ್ತಾರೆ. ಆಡಳಿತಾರೂಢ ಸಂಯುಕ್ತ ರಾಷ್ಟ್ರೀಯ ಪಕ್ಷ(ಯುಎನ್ ಪಿ), ನವ ಪ್ರಜಾಸತ್ತಾತ್ಮಕ ರಂಗದ (ಎನ್ಡಿಎಫ್) ಉಪನಾಯಕರಾದ ಸಜಿತ್(52) ಅವರು ಮಹಿಳಾ ಪರ ಧೋರಣೆ ಮೂಲಕ ಈ ಬಾರಿ ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಮಹಿಳೆಯರಿಗೆ ಸಮಾನ ಹಕ್ಕು, ಋತುಚಕ್ರದ ವಿಷಯದ ಬಗ್ಗೆ ಚರ್ಚೆಗೆ ಕರೆ ನೀಡಿದ್ದರು. ಪ್ರೇಮದಾಸರನ್ನು '' ಪ್ಯಾಡ್ ಮ್ಯಾನ್ '' ಎಂದು ಎದುರಾಳಿ ರಾಜಪಕ್ಸಾ ಕರೆದಿದ್ದನ್ನು ಮುಕ್ತವಾಗಿ ಸ್ವೀಕರಿಸಿ, ಚುನಾವಣೆ ಎದುರಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries