HEALTH TIPS

'ಸನಾತನ' ಧರ್ಮ ಪ್ರಾಬಲ್ಯವಿರುವವರೆಗೆ ಮಾತ್ರ ದೇಶ ಸುರಕ್ಷಿತ- ಕೇಂದ್ರ ಸಚಿವ ಗಿರಿರಾಜ್ ಸಿಂಗ್

     
       ನವ ದೆಹಲಿ: ಸನಾತನ ಧರ್ಮ ಪ್ರಾಬಲ್ಯವಿರುವವರೆಗೆ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.
   ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ದೇಶದಲ್ಲಿನ ಜನಸಂಖ್ಯಾ ಸ್ಫೋಟ ನಡೆಯುತ್ತಿರುವ ರೀತಿ, ನಾವು ಎಚ್ಚರವಾಗಿರಲು ಸಮಯವಾಗಿದೆ. ಜನಸಂಖ್ಯೆಯನ್ನು ಧರ್ಮದೊಂದಿಗೆ ಸಂಪರ್ಕಿಸುವ ಅಗತ್ಯವಿದೆ. ಪೂಜಾರಿಗಳ ಕೈಯಲ್ಲಿ ಮಂದಿರಗಳನ್ನು ಬಿಟ್ಟು, ಹಿಂದೂಗಳನ್ನು ಜಾಗೃತಗೊಳಿಸಲು ಹಳ್ಳಿಗಳ ಕಡೆಗೆ ತೆರಳಿ. ಒಂದು ವೇಳೆ ಹಿಂದೂ ಧರ್ಮ ತೊರೆದರೆ ನಮ್ಮ ಗುರುತಿಸುವಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದರು. ಸನಾತನ ಧರ್ಮದ ಸಿದ್ದಾಂತಗಳು ಮತ್ತು ಅದರ ಉಪದೇಶಗಳನ್ನು ಅಂತರ್ಗತತೆಯನ್ನು ಕಲಿಸುವುದರಿಂದ ಹಿಂದೂಗಳು ಮತಾಂಧರಗೊಳ್ಳಲು ಸಾಧ್ಯವಿಲ್ಲ ಎಂದ ಅವರು, ಕೆಲವು ಧರ್ಮಗಳು ತಮ್ಮ ತತ್ವ ಸಿದ್ದಾಂತಗಳನ್ನು ಅನುಸರಿಸದ ಜನರನ್ನು ಕಾಫಿರ್ ಅಂತಾ ಘೋಷಿಸುತ್ತವೆ ಮತ್ತು ಅವರ ವಿರುದ್ಧ ಜಿಹಾದ್ ಗೆ ಕರೆ ನೀಡುತ್ತವೆ ಎಂದು ಯಾವುದೇ ಧರ್ಮವನ್ನು ಹೆಸರಿಸದೆ ಹೇಳಿದರು. ನಮ್ಮ  ಹಿರಿಯರು ಮತ್ತು ಪೂರ್ವಜರು ಯಾವ ರೀತಿ ಇರಬೇಕೆಂದು ನಮಗೆ ಕಲಿಸಿದ ಕಾರಣ ನಾವು ಬದಲಾಗಲು ಸಾಧ್ಯವಿಲ್ಲ. ನಾವು ಯಾವ ಜಾತಿ ಅಥವಾ ಸಮಾಜಕ್ಕೆ ಸೇರಿದವನು ಎಂಬುದು ಮುಖ್ಯವಲ್ಲ, ಬೆಳಗ್ಗೆ ಇರುವೆಗೆ ಬೆಲ್ಲ, ಸಸ್ಯಗಳಿಗೆ ನೀರು ಮತ್ತು ನಾಗರಪಂಚಮಿಯಲ್ಲಿ ಹಾವುಗಳು ಕಚ್ಚಬಹುದು ಎಂಬ ಭಯ ಇದ್ದರೂ ಸಹ ಹಾಲನ್ನು ಹಾಕುತ್ತೇವೆ ಎಂದರು.
   ಯಾರಾದರೂ ಏಕಾದಶಿಯ ದಿನ ಉಪವಾಸ ಮಾಡದೆ ದೇವಾಲಯಕ್ಕೆ ಬರದಿದ್ದರೆ ಅಂತಹವರ ವಿರುದ್ಧ ಇತರ ಧರ್ಮಗಳ ರೀತಿಯಲ್ಲಿ ಕಾಫಿರ್ ಅಂತಾ ಘೋಷಿಸಿ ಜಿಹಾದ್ ಗೆ ಕರೆ ನೀಡುವುದಿಲ್ಲ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries