ಕುಂಬಳೆ: ಗಡಿನಾಡು ಕಾಸರಗೋಡಿನ ಖ್ಯಾತ, ಹಿರಿಯ ಕನ್ನಡ ಪತ್ರಕರ್ತ ಯಕ್ಷಗಾನ ಜಗತ್ತಿಗೆ ಮಾಧ್ಯಮ ಸಂಸ್ಕøತಿಯ ನವೀನ ಪತ್ರಿಕೋದ್ಯಮ ಪರಿಚಯಿಸಿ, ಯಕ್ಷಗಾನ ಪತ್ರಿಕೋದ್ಯಮದಲ್ಲಿ ಕ್ರಾಂತಿಯೆಬ್ಬಿಸಿದ ಲೇಖಕ, ಕಣಿಪುರ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅವರ ವಿಶೇಷ ಸಂದರ್ಶನ ಮಂಗಳೂರು ಎಲೋಶಿಯಸ್ ಕಾಲೇಜಿನ ಸಮುದಾಯ ಬಾನುಲಿಯ 'ರೇಡಿಯೋ ಸಾರಂಗ್' ನಲ್ಲಿ ಬುಧವಾರ ಸಂಜೆ 4.30ಕ್ಕೆ ನೇರಪ್ರಸಾರವಾಗಲಿದೆ. ಜಗತ್ತಿನಾದ್ಯಂತದ ಪ್ರೇಕ್ಷಕರಿಗೆ ಇದು 'ರೇಡಿಯೋ ಸಾರಂಗ್ 107.8 ಎಫೆಮ್ ನಲ್ಲಿ ಲಭ್ಯವಾಗಲಿದ್ದು, ಆಸಕ್ತರಿಗೆ ಕೇಳುತ್ತಾ, ಪಾಲ್ಗೊಳ್ಳಬಹುದಾಗಿದೆ.
ಕರಾವಳಿಯ ಯಕ್ಷಗಾನ ಜಗತ್ತಿಗೆ ಸೃಜನಶೀಲ ಪತ್ರಿಕೋದ್ಯಮ ಮತ್ತು ಬರವಣಿಗೆಯನ್ನು ಪರಿಚಯಿಸಿರುವುದು ಕಣಿಪುರ ಮಾಸಪತ್ರಿಕೆಯ ಕೊಡುಗೆ. ಇದು ಕಾಸರಗೋಡಿನ ಕುಂಬ್ಳೆ ನಿವಾಸಿ, ಬಹುಮುಖೀ ಸಾಂಸ್ಕøತಿಕ ಅಭಿರುಚಿಗಳ ಸಾಧಕ ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಇವರ ಏಕಾಂಗಿ ಸಾಧನೆಯ ಮೂಲಕ ಸಂದ ಕಾಣಿಕೆ. ಪ್ರಸಕ್ತ ಕಣಿಪುರ ಮಾಸಪತ್ರಿಕೆ 8ವರ್ಷಗಳನ್ನು ದಾಟುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಪಾದಕರ ಸಂದರ್ಶನ ನಡೆಯುತ್ತಿದೆ. ಕಾಸರಗೋಡಿನ ಕನ್ನಡ ಪತ್ರಿಕೋದ್ಯಮದಲ್ಲಿ ವಿಶೇಷ ಸಾಧನೆಯ ಕೊಡುಗೆ ಸಲ್ಲಿಸಿರುವುದನ್ನುಪರಿಗಣಿಸಿ 'ವಿಶ್ವವಾಣಿ' ದೈನಿಕ ಈ ಹಿಂದೆ ಸಾಪ್ತಾಹಿಕದ ಅಗ್ರಲೇಖನ ಪ್ರಕಟಿಸಿತ್ತು.