ಕಾಸರಗೋಡು: ಸಮನ್ವಯ ಕಾಸರಗೋಡು ವತಿಯಿಂದ 'ಭಾರತ್ ಉತ್ಸವ್-19' ಅಂತಾರಾಜ್ಯ ಕಲೋತ್ಸವ, ಕಬಡ್ಡಿ ಪಂದ್ಯಾಟ ಹಾಗೂ ಕನ್ನಡ ಸಮ್ಮೇಳನ ನವೆಂಬರ್ 30ಮತ್ತು ಡಿಸೆಂಬರ್ 14ರಂದು ಕಾಸರಗೋಡು ಸರ್ಕಾರಿ ಕಾಲೇಜು ವಠಾರದಲ್ಲಿ ಜರುಗಲಿದೆ.
ಭಾರತ್ ಉತ್ಸವ್ ಅಂಗವಾಗಿ ಎಲ್ಲ ವಲಯದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ಭಾಷೆಗಳಲ್ಲಿ ಭಾಷಣ, ಪತ್ರಿಕಾ ವಾಚನ, ಸಣ್ಣಕತೆ-ಕವಿತಾ ರಚನೆ, ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳು, ಜಾನಪದ ಗೀತೆ, ಮಾಪಿಳ್ಳಪಾಟ್, ಭರತನಾಟ್ಯ, ಜಾನಪದ ನೃತ್ಯ, ಸಿನಿಮಾ ಡ್ಯಾನ್ಸ್, ಒಪ್ಪನ, ತಿರುವಾದಿರ, ಮಿಮಿಕ್ರಿ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಾಗಿ ನಡೆಯಲಿದೆ.ಅಂಗನವಾಡಿ, ಕೆಜಿ, ಎಲ್‍ಪಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕಿಯರು, ಹೆತ್ತವರಿಗಾಗಿಯೂ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿಯೊಬ್ಬಜನಿಗೆ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

