ಕಾಸರಗೋಡು: ಇರಿಯಣ್ಣಿಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದಲ್ಲಿ 407ಅಂಕಗಳೊಂದಿಗೆ ಹೊಸದುರ್ಗ ಉಪಜಿಲ್ಲೆ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಕಾಸರಗೋಡು ಉಪಜಿಲ್ಲೆ ಎರಡನೇ ಸಥಾನ ಪಡೆದುಕೊಂಡಿದೆ. ಹೈಯರ್‍ಸೆಕೆಂಡರಿ ಶಾಲಾ ವಿಭಾಗದಲ್ಲಿ ಹೊಸದುರ್ಗ ಉಪಜಿಲ್ಲೆ 392ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕಾಸರಗೋಡು ಉಪಜಿಲ್ಲೆ 385ಅಂಕದೊಂದಿಗೆ ದ್ವಿತೀಯ ಹಾಗೂ ಚೆರ್ವತ್ತೂರು ಉಪಜಿಲ್ಲೆ 346ಅಂಕಗಳೊಂದಿಗೆ ತೃತೀಯ ಸಥಾನ ಪಡೆದುಕೊಮಡಿತು.
ಯುಪಿ ವಿಭಾಗದಲ್ಲಿ ಕಾಸರಗೋಡು ಉಪಜಿಲ್ಲೆ 161ಅಂಕ ಪಡೆದು ಪ್ರಥಮ, ಚೆರ್ವತ್ತೂರು 144ಅಂಕಗಳೊಮದಿಗೆ ದ್ವಿತೀಯ, ಬೇಕಲ ಉಪಜಿಲ್ಲೆ 139ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿತು. ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ಧೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಸುಪ್ರೀತಾ ಸುಧೀರ್ ರೈ ಮತ್ತು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಸಮಾರೋಪ:
ಜಿಲ್ಲಾ 60ನೇ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವನ್ನು ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿ ಮಾತನಾಡಿ, ಇರಿಯಣ್ಣಿಯಲ್ಲಿ ನಡೆದಿರುವ ಶಾಲಾ ಕಲೋತ್ಸವದ ಯಶಸ್ಸು, ಕಾಞಂಗಾಡಿನಲ್ಲಿ ನಡೆಯಲಿರುವ ರಾಜ್ಯ ಶಾಲಾ ಕಲೋತ್ಸವಕ್ಕೆ ಭದ್ರಬುನಾದಿಯಾಘಿದೆ. ಜಿಲ್ಲೆಯ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖ್ಯಾಥಿ ಗಳಿಸಲಿ ಎಂದು ಹಾರೈಸಿದರು. ಶಾಸಕ ಕೆ. ಕುಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಬಹುಮಾನ ವಿತರಿಸಿದರು. ಈ ಸಂದರ್ಭ ಹೊರತರಲಾದ ಸಮರಣಸಂಚಿಕೆಯನ್ನು ಸಚಿವ ಇ.ಚಂದ್ರಶೇಖರನ್ ಬಿಡುಗಡೆಗೊಳಿಸಿದರು. ಶಾಲಾ ಕಲೋತ್ಸವಕ್ಕೆ ಆಹಾರಪದಾರ್ಥ ತಯಾರಿಸಿದ ಪಾಕತಜ್ಞರನ್ನು ಅಭಿನಂದಿಸಲಾಯಿತು.
ಚಿತ್ರ ಮಾಹಿತಿ: 16ನವೆಂಬರ್-6: ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಗಳಿಸಿದ ಅಗಲ್ಪಾಡಿ ಶಾಲಾ ತಂಡ