HEALTH TIPS

ದುರಹಂಕಾರಕ್ಕೆ ಪಿಣರಾಯಿ ಸರ್ಕಾರ ಗರಿಷ್ಠ ಬೆಲೆ ತೆರಬೇಕಾದೀತು : ಹರ್ಷಾದ್ ವರ್ಕಾಡಿ-ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ

             
      ಮಂಜೇಶ್ವರ :  ಆಡಳಿತ ವೈಫಲ್ಯವನ್ನು ಮರೆಮಾಚಲು ಕೇರಳದ ಪಿಣರಾಯಿ ವಿಜಯನ್ ಸರಕಾರವು ವಿರೋಧಿಗಳ ಮೇಲೆ ದಮನ ನೀತಿ ಅನುಸರಿಸುತ್ತಿದ್ದು, ಈ ದುರಹಂಕಾರ ಮತ್ತು ದುರಾಡಳಿತಕ್ಕೆ ಸಿಪಿಎಂ ಗರಿಷ್ಠ ಬೆಲೆ ತೆರಬೇಕಾದೀತು ಎಂದು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ ಎಚ್ಚರಿಸಿದ್ದಾರೆ.
      ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಬಾಲಕಿಯರ ಕೊಲೆ, ಅತ್ಯಾಚಾರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಪಾತ್ರರಿಗೆ ಅಂಕ ದಾನ ಮಾಡಿದ ಕ್ರಿಮಿನಲ್ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕೆ ಎಸ್ ಯು ಕಾರ್ಯಕರ್ತರು ನಡೆಸಿದ ಶಾಂತಿಯುತ ಸೆಕ್ರಟರಿಯೇಟ್ ಮಾರ್ಚ್ ಮೇಲೆ ಪೆÇಲೀಸರು ನಡೆಸಿದ ಪೈಶಾಚಿಕ ಲಾಠಿ ಚಾರ್ಜ್ ಮತ್ತು ಶಾಸಕ ಶಾಫಿ ಪರಂಬಿಲ್ ಹಾಗೂ ಕೆ.ಎಸ್ ಯು ರಾಜ್ಯಾಧ್ಯಕ್ಷ ಕೆಎಂ ಅಭಿಜಿತ್ ಮೇಲಿನ ಕ್ರೂರ ಹಲ್ಲೆಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ನಡೆಸಲಾದ ಪ್ರತಿಭಟನಾ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜಕೀಯ ವಿರೋಧಿಗಳನ್ನು ಪೆÇಲೀಸರನ್ನು ಛೂ ಬಿಟ್ಟು ದಮನಿಸಬಹುದೆಂಬ ಸರ್ಕಾರದ ಕನಸು ತಿರುಕನ ಕನಸಾಗಲಿದೆ. ರಾಜ್ಯದ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ನಕಲ್ ಎನ್ ಕೌಂಟರ್, ಲಾಕಪ್ ಕೊಲೆ, ಲಾಠಿ ಚಾರ್ಜ್ ಮುಂತಾದ ಮೂರನೇ ದರ್ಜೆ ಗಿಮಿಕ್ ಗಳಲ್ಲಿ ನಿರತವಾದ ಪಿಣರಾಯಿ ಸರ್ಕಾರ ಅದರ ಸ್ವಯಂಕೃತಾಪರಾಧಗಳಿಂದ ನೆಲ ಕಚ್ಚಲಿದೆ. ಭಾರತದಲ್ಲಿ ಸಿಪಿಎಂನ ಕೊನೆಯ ಮುಖ್ಯಮಂತ್ರಿ ಎಂಬ ದಾಖಲೆ ಪಿಣರಾಯಿ ಹೆಸರಿಗೆ ಲಭಿಸುವುದು ಖಚಿತವಾಗಿದ್ದು, ಈ ಆಡಳಿತಾವಧಿಯ ನಂತರ ಸಿಪಿಎಂನ ಜನದ್ರೋಹಿ ಸಚಿವರುಗಳಿಗೆ ಜೀವನಪೂರ್ತಿ ಕೋರ್ಟ್, ಜೈಲು ಅಲೆದಾಡಬೇಕಾದ  ಸ್ಥಿತಿ ಉಂಟಾಗಲಿದೆ. ವಿದ್ಯಾರ್ಥಿಗಳ ಹೋರಾಟವನ್ನು ಸಮಚಿತ್ತದಿಂದ ನಿಭಾಯಿಸುವ ಬದಲು, ಕ್ರೂರ ದೌರ್ಜನ್ಯಗಳಿಂದ ಎದುರಿಸಿದ ಸರಕಾರವು ಸಕಲ ವಲಯಗಳಲ್ಲೂ ಸಂಪೂರ್ಣ ವಿಫಲಗೊಂಡಿದೆ. ದಲಿತ ಬಾಲಕಿಯರ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಸಿಪಿಎಂ ಕಾರ್ಯಕರ್ತರನ್ನು ರಕ್ಷಿಸಲು ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ತಮ್ಮ ಅನುಯಾಯಿಗಳ ಮಕ್ಕಳಿಗೆ ಕಾನೂನು ಉಲ್ಲಂಘಿಸಿ ಅಂಕದಾನ ನಡೆಸಿದ ಎಡರಂಗ ಸರಕಾರವು ಕೇರಳದ ಶಿಕ್ಷಣ ವ್ಯವಸ್ಥೆಯನ್ನೇ ಕುಲಗೆಡಿಸಿದೆ..ಪಕ್ಷದ ಕಾರ್ಯಕರ್ತರಿಗೆ ಉದ್ಯೋಗ ಒದಗಿಸಲು ಲೋಕಸೇವಾ ಆಯೋಗವನ್ನು ತನ್ನ ಪಂಜರದ ಗಿಣಿಯಾಗಿಸಿಕೊಂಡು ಇನ್ನಿಲ್ಲದ ಸ್ವಜನ ಪಕ್ಷಪಾತ ನಡೆಸುತ್ತಿದೆ. ಜನತೆಗೆ ಹೊರೆಯಾಗಿ ಮಾರ್ಪಟ್ಟ ಈ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ನಾಡಿನ ಜನತೆ ಕಾಂಗ್ರೆಸ್ ನ ಹೋರಾಟಗಳಿಗೆ ಬೆಂಬಲ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
    ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಾಫಿ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಇಬ್ರಾಹಿಂ ಐಆರ್ ಡಿಪಿ, ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್, ಸಂಕಬೈಲು ಸತೀಶ ಅಡಪ, ನಾಗೇಶ್ ಮಂಜೇಶ್ವರ, ಓಂ ಕೃಷ್ಣ, ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ದಿವಾಕರ್.ಎಸ್.ಜೆ, ಸತ್ಯನ್ ಸಿ.ಉಪ್ಪಳ, ವಸಂತರಾಜ ಶೆಟ್ಟಿ,  ನೇತಾರರಾದ ಟಿ.ಪ್ರಭಾಕರ ನಾಯ್ಕ್, ಮೊಹಮ್ಮದ್ ಮಜಾಲು, ಸದಾಶಿವ ಶೆಟ್ಟಿ ಸದಾಶಿವ.ಕೆ,ಆರಿಫ್ ಮಚ್ಚಂಪಾಡಿ, ಶಕೂರ್ ತಲೇಕಳ,ರಂಜಿತ್ ಮಂಜೇಶ್ವರ, ಜಗದೀಶ ಮೂಡಂಬೈಲು, ಮಾಲಿಂಗ, ಸುಧಾಕರ ಉಜಿರೆ, ಮೊಹಮ್ಮದ್ ಹಾಜೀ, ಮಹಾರಾಜ,  ರಾಮ, ಯುವಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಕಳಿಯೂರು,  ಇರ್ಷಾದ್ ಮಂಜೇಶ್ವರ, ಬಾಸಿತ್, ಅಝೀಝ್ ಕಲ್ಲೂರು, ರಾಜೇಶ್ ನಾಯ್ಕ್,, ಅಬ್ದುಲ್ ರಹ್ಮಾನ್, ಜೆ.ಮೊಹಮ್ಮದ್, ಹನೀಫ್ ಕುಮೇರ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries