ಮಂಜೇಶ್ವರ: ಸಾಹಿತ್ಯ ಕೂಟ ಕುಂಜತ್ತೂರು ಇದರ ಆಶ್ರಯದಲ್ಲಿ ಶಂಕರ ತೂಮಿನಾಡು ಇವರ ನಿವಾಸದಲ್ಲಿ ಸಾಹಿತ್ಯ ದರ್ಶನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಾಹಿತ್ಯ ಕೂಟದ ಅಧ್ಯಕ್ಷ ಬಿ. ನಾರಾಯಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ವೈದ್ಯ ವಿಜಯ ಕುಮಾರ್ ಎಂ. ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕವಿಯತ್ರಿ, ಉಪನ್ಯಾಸಕಿ ಕವಿತಾ ಅಡೂರು ಅವರು ಕನ್ನಡದ ಜನಪ್ರಿಯ ಸಾಹಿತಿ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದ ಅರ್ಥ ವಿವರಣೆಯನ್ನು ತಿಳಿಸಿ ದರ್ಶನವನ್ನು ಮನಮುಟ್ಟುವಂತೆ ಪ್ರಸ್ತುತ ಪಡಿಸಿದರು.
ಕೃಷ್ಣಪ್ಪ ಪೂಜಾರಿ ಕನ್ನಡ ಗಾದೆಗಳ ಮಹತ್ವವನ್ನು ತಿಳಿಸಿ ಉದಾಹರಣೆ ಸಹಿತ ವಿವರಿಸಿದರು. ಶಂಕರ ತೂಮಿನಾಡು ಇವರು ಜೀವನಾನುಭವದೊಂದಿಗೆ ಸಾಹಿತ್ಯ ವಿಕಾರಗಳನ್ನು ಪ್ರಸ್ತುತ ಪಡಿಸಿದರು. ಬಳಿಕ ಸದಸ್ಯರಿಂದ ಸ್ವರಚಿತ ಕವನ ವಾಚನ, ಮೆಚ್ಚಿದ ಲೇಖನದ ವಾಚನ, ಮಕ್ಕಳಿಂದ ಗಾಯನ, ರಸಪ್ರಶ್ನೆ, ಅಂತ್ಯಾಕ್ಷರಿ ಜರಗಿತು. ನಾರಾಯಣ ಮಾಸ್ತರ್ ಚಿಪ್ಲು ಕೋಟೆ ಸ್ವಾಗತಿಸಿ, ಈಶ್ವರ ಮಾಸ್ತರ್ ವಂದಿಸಿದರು. ಕೆ.ಪಿ.ಸೊಮಶೇಖರ್ ಕಾರ್ಯಕ್ರಮ ನಿರೂಪಿಸಿದರು.