HEALTH TIPS

ಬಿಜೆಪಿ ಆಳ್ವಿಕೆಯ ರಾಜ್ಯಗಳ ಸಂಖ್ಯೆ ಇಳಿಕೆ: ಒಂದೇ ವರ್ಷದಲ್ಲಿ 5 ರಾಜ್ಯಗಳ ಕಳೆದುಕೊಂಡ ಕಮಲ ಪಾಳಯ

 
      ನವದೆಹಲಿ: ಜಾಖಾರ್ಂಡ್ ವಿಧಾನಸಬೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದರೊಂದಿಗೆ ಕಳೆದ 1 ವರ್ಷದಲ್ಲಿ 5 ರಾಜ್ಯಗಳು ಬಿಜೆಪಿಯ ಕೈಯಿಂದ ಜಾರಿದಂತಾಗಿದೆ. ಇದರಿಂದಾಗಿ ಈ ಸತತ ಸೋಲುಗಳು ಬಿಜೆಪಿ ಪಾಳಯಕ್ಕೆ ಭವಿಷ್ಯದಲ್ಲಿ ಎಚ್ಚರಿಕೆ ಗಂಟೆಯಾಗಿವೆ ಎಂದೇ ಹೇಳಲಾಗುತ್ತಿದೆ.
   2018ರ ಅಂತ್ಯದಲ್ಲಿ ನಡೆದ ರಾಜ್ಯಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿತ್ತು. ನಂತರ ಮಹಾರಾಷ್ಟ್ರದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮಿತ್ರಪಕ್ಷ ಶಿವಸೇನೆಯ ಜೊತೆಗಿನ ಮುನಿಸಿನ ಕಾರಣ ಅಧಿಕಾರಕ್ಕೆ ಏರಲು ಸಾಧ್ಯವಾಗಲಿಲ್ಲ. ಇದೀಗ ಜಾಖಾರ್ಂಡ್ ರಾಜ್ಯದಲ್ಲಿ ಬಿಜೆಪಿ ಸೋಲು ಕಂಡಿದೆ. ಇತ್ತೀಚೆಗೆ ಹರಿಯಾಣದಲ್ಲಿ ಕೂಡ ಬಿಜೆಪಿಗೆ ಬಹುಮತ ಪ್ರಾಪ್ತಿಯಾಗಲು ಸಾಧ್ಯವಾಗಿಲಿಲ್ಲ. ಆದರೆ, ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಕ್ಷದ ಬೆಂಬಲದಿಂದ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.
             ಇಷ್ಟಕ್ಕೂ ಬಿಜೆಪಿಗೆ ಸೋಲಿ ಕಾರಣವಾದ ಅಂಶವಾದರೂ ಏನು?
     ಆದಿವಾಸಿ ಜನಾಂಗ ಜಾಖಾರ್ಂಡ್ ನಲ್ಲಿ ಪ್ರಬಲ. ಆದರೆ, ಆದಿವಾಸಿಯಲ್ಲದ ರಘುಬರ ದಾಸ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಿದ್ದು.
ಈ ಚುನಾವಣೆಯಲ್ಲಿ ಮೋದಿ ಅವರು ಚುನಾವಣಾ ವಿಷಯವಾಗಿರಲಿಲ್ಲ.
     ರಾಜ್ಯ ಸರ್ಕಾರದ ಸಾಧನೆಗಳ ಆಧಾರದಲ್ಲಿ ಚುನಾವಣೆ ನಡೆಯಿತು.
     ರಾಜ್ಯದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರಿಗಳಿಗೆ ಮಣೆ. ಹೀಗಾಗಿ ಇದು ವಿಭಿನ್ನ ಸರ್ಕಾರವಲ್ಲ ಎಂದು ಜನತೆಗೆ ಎನಿಸಿತ್ತು.
     ರಘುಬರ ದಾಸ್ ದರ್ಪದ ಮನುಷ್ಯ. ಅಧಿಕಾರ ಅವರ ತಲೆಗೇರಿದ ಎಂದು ಜನರ ಮನಸ್ಸಿನಲ್ಲಿ ಬೇರೂರಿತ್ತು.
     ಜಾಖಾರ್ಂಡ್ ರಾಜ್ಯವನ್ನು ಆದಿವಾಸಿ ಮುಕ್ತ ರಾಜ್ಯ ಮಾಡುತ್ತೇನೆಂದು ದಾಸ್ ಒಮ್ಮೆ ಹೇಳಿದ್ದರು. ಬುಡಕಟ್ಟು ಕಾಯ್ದೆ ತಿದ್ದುಪಡಿಗಳ ಆದಿವಾಸಿಗಳ ಆಕ್ರೋಶಕ್ಕೆ ಇದು ಕಾರಣವಾಗಿತ್ತು.
     ಮಿತ್ರ ಪಕ್ಷವಾಗಿ ಎಜೆಎಸ್'ಯುವನ್ನು ಕೈಬಿಟ್ಟ ದಾಸ್, ಬಿಜೆಪಿಯ ಇತರ ನಾಯಕರ ಬಗ್ಗೆಯೂ ನಿರ್ಲಕ್ಷ್ಯ. ಏಕಾಂಗಿಯಾಗಿ ಚುನಾವಣೆಗೆ ಹೋಗಿದ್ದರಿಂದ ಬಿಜೆಪಿಗೆ ನಷ್ಟ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries