HEALTH TIPS

ಗಿಳಿವಿಂಡುವಿನಲ್ಲಿ ಏರ್ಯ ಆಳ್ವರ ಮಾಸದ ನೆನಪು ಕಾರ್ಯಕ್ರಮ- ಏರ್ಯ ಸಾಹಿತ್ತಿಕ,ಸಾಮಾಜಿಕ,ಸಹಕಾರಿ ಹರಿಕಾರ ಮಾತ್ರರಲ್ಲದೆ ಅಪ್ಪಟ ಹಿಂದೂವಾಗಿದ್ದರು-ಡಾ.ರಮಾನಂದ ಬನಾರಿ


        ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಏರ್ಯದ ಆಳ್ವರು ಮಾಸದ ನೆನಪು ಕಾರ್ಯಕ್ರಮ ಗಿಳಿವಿಂಡು ಸಮುಚ್ಚಯದ ಪಾರ್ತಿಸುಬ್ಬ ವೇದಿಕೆಯಲ್ಲಿ ಶನಿವಾರ ಸಂಜೆ ನಡೆಯಿತು.
     ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅವರು, ಏರ್ಯರ ಮಾಸದ ನೆನಪು ಕಾರ್ಯಕ್ರಮವನ್ನು ಗಿಳಿವಿಂಡು ಪರಿಸರದಲ್ಲೇ ಮಾಡಬೇಕು ಎಂಬ ಹಂಬಲ ಪ್ರೊ.ರಾಮಚಂದ್ರ ಅವರದಾಗಿತ್ತು. ಅದೇ ಕಾರಣಕ್ಕೆ ಗಿಳಿವಿಂಡು ಸಮುಚ್ಚಯದಲ್ಲಿ ಏರ್ಯರ ಮಾಸದ ಕಾರ್ಯಕ್ರಮ ಆಯೋಜಿಸಲಾಗಿದೆ. ಆಯೋಜನೆಗೆ ಒತ್ತಾಸೆಯಾಗಿ ಸ್ಪೂರ್ತಿಯಾಗಿದ್ದ ಪ್ರೊ.ಎಂ.ರಾಮಚಂದ್ರ ಅವರ ಅಕಾಲಿಕ ನಿಧನವು ತನಗೆ ನೋವುಂಟು ಮಾಡಿದೆ. ಆದರೆ ಈ ಕಾರ್ಯಕ್ರಮವನ್ನು ಮುಂದೂಡಿದರೆ ರಾಮಚಂದ್ರರ ಆತ್ಮಕ್ಕೆ ಶಾಂತಿ ದೊರಕಲಾರದು ಎಂಬ ಭಾವನೆಯಿಂದ ತುರ್ತು  ನಡೆಸಲಾಗಿದೆ ಎಂದರು. ಈ ಸಂದರ್ಭ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಾಗೂ ಪ್ರೊ.ಎಂ.ರಾಮಚಂದ್ರವರನ್ನು ಸ್ಮರಿಸಿದರು. ಪ್ರಮಾಣಿಕತೆಯ ಪ್ರತೀಕವಾಗಿದ್ದ ರಾಮಚಂದ್ರ ಅವರು ಕಾರ್ಕಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಹಲವು ಕೃತಿ ಸಾಹಿತ್ಯವನ್ನು ರಚಿಸಿದ್ದ ರಾಮಚಂದ್ರರ ಅನಿರೀಕ್ಷಿತವಾದ ಅಗಲಿಗೆ ನೋವು ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ ಎಂದರು. ಏರ್ಯ ಅವರು ಕತೃತ್ವ ಶಕ್ತಿಗೆ ಹೆಸರಾದವರು. ಏರ್ಯ ತಮ್ಮ ಸಾಹಿತ್ತಿಕ ಕಾರ್ಯದೊಂದಿಗೆ ಸಂವಾದಿಯಾಗಿದ್ದವರು. ಸಹಕಾರಿ ತತ್ವದ ಹರಿಕಾರರಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿಯೂ, ಅಪ್ಪಟ ಹಿಂದೂವಾಗಿ ಹೆಸರುವಾಸಿಯಾಗಿದ್ದರೆಂದರು.
             ಪ್ರೊ.ಎಂ ರಾಮಚಂದ್ರ ಅವರಿಗೆ ಶ್ರದ್ಧಾಂಜಲಿ:
   ಅಕಾಲಿಕ ನಿಧನರಾದ ಏರ್ಯ ಆಳ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ. ರಾಮಚಂದ್ರ ಅವರಿಗೆ ವೇದಿಕೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಕಾರ್ಯಕ್ರಮದ ಅತಿಥ್ಯ ವಹಿಸಿ ಮಾತನಾಡಿದ ಪ್ರೊ.ಪಿ.ಎನ್ ಮೂಡಿತ್ತಾಯ ಅವರು, ಗತಿಸಿದ ಪ್ರೊ.ಎಂ ರಾಮಚಂದ್ರ ಅವರು ಕಾಸರಗೋಡು ಮೂಲದವರರಾಗಿದ್ದರು. ಉತ್ತಮ ಸಾಹಿತಿ ಸಂಘಟಕರಾಗಿದ್ದ ಅವರು ಹತ್ತು ಹಲವು ಸಾಹಿತ್ಯ ಕಾರ್ಯಕ್ರಮಗಳನ್ನು ಕಾರ್ಕಳದಲ್ಲಿ ಆಯೋಜಿಸಿ ಹೆಸರುವಾಸಿಯಾಗಿದ್ದರು. ಮೊದಲು ಕಾಸರಗೋಡು ಬಿ.ಎಂ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ರಾಮಚಂದ್ರ ಅವರು ನಂತರ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಪ್ರಧ್ಯಾಪಕರಾಗಿ ಸೇವೆ ಸಲ್ಲಸಿದ್ದರು. ಸೇಡಿಯಾಪು ಅವರ ಹಿರಿಯ ಅಭಿಮಾನಿಯಾಗಿದ್ದ ರಾಮಚಂದ್ರ ಅವರ ಸಾಹಿತ್ಯ ಕೊಡುಗೆಗಳು ಸ್ಮರಣೀಯ ಎಂದರು. ಈ ಸಂದರ್ಭ ಏರ್ಯ ಲಕ್ಷ್ಮೀನಾರಾಯಣ ಆಳ್ವರನ್ನು ಸ್ಮರಿಸಲಾಯಿತು. ಆಳ್ವ ಪ್ರತಿಷ್ಠಾನದ ಆರಂಭಿಸುವಿಕೆಯಲ್ಲಿ ಪ್ರೊ.ಎಂ.ರಾಮಚಂದ್ರ ಅವರ ಕೊಡುಗೆ ದೊಡ್ಡದಿದೆ. ಆರ್ಯ ಮಾಸದ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಬೇಕಿದ್ದ ಪ್ರೊ.ರಾಮಚಂದ್ರರ ಅಗಲಿಕೆ ನೋವು ತಂದಿದೆ ಎಂದರು.
      ಎಸ್.ಎ.ಟಿ ಶಾಲಾ ಅಧ್ಯಾಪಕ ವಿರೇಶ್ವರ ಕರ್ಮಕರ್ ಅಗಲಿದ ರಾಮಚಂದ್ರ ಹಾಗೂ ಏರ್ಯ ಸ್ಮರಣೆಯನ್ನು ಮಾಡಿದರು. ಸ್ಮಾರಕ ಸಮಿತಿಯ ಟ್ರಸ್ಟಿ ಸುಭಾಶ್ಚಂದ್ರ ಕಣ್ವತೀರ್ಥ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾವ್ಯ ವಾಚನವನ್ನು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿನಿಯರಾದ ಶಿಲ್ಪಾ, ಸ್ನೇಹಾ, ಜಲಧಿ, ರಕ್ಷಿತಾ ಮಯ್ಯ, ಅನನ್ಯಾ ಪೈ, ಪ್ರಣಮ್ಯಾ, ಪ್ರಣನ್ಯಾ, ಪ್ರಜಿನಾ ಕಾವ್ಯ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗಿಳಿವಿಂಡು ಸ್ಮಾರಕದ ಕಾರ್ಯ ನಿರ್ವಹಣಾಧಿಕಾರಿ ಡಾ.ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries