HEALTH TIPS

ವಿಶೇಷ ಕೈಗವಸುಗಳು, ಬಹುಪದರದ ಜಾಕೆಟ್ ಮತ್ತು ಗ್ಯಾಜೆಟ್‍ಗಳು: ಸಿಯಾಚೆನ್‍ನ ಪ್ರತಿ ಸೈನಿಕನಿಗೆ ಸಿಗ್ತಾ ಇದೆ 1 ಲಕ್ಷ ರೂ.ಗಳ ವೈಯಕ್ತಿಕ ಕಿಟ್

 
         ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿಸಿಯಾಚಿನ್ ಹಿಮನದಿಯಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೈನಿಕರು ಅಲ್ಲಿನ ತೀವ್ರ ಶೀತ ಪರಿಸ್ಥಿತಿಗಳ ವಿರುದ್ಧ ರಕ್ಷಣೆ ಪಡೆಯಲು ಇದೀಗ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಕಿಟ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
         ಚಳಿಯಿಂದ ರಕ್ಷಣೆಗಾಗಿ  ವೈಯಕ್ತಿಕ ಕಿಟ್ ಜೊತೆಗೆ, ಪ್ರತಿ ಸೈನಿಕನು1.5 ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳನ್ನು ಪಡೆಯಲಿದ್ದಾರೆ ಎಂದು ಸೇನಾ ಮೂಲಗಳು ಎಎನ್‍ಐಗೆ ತಿಳಿಸಿವೆ. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಜನವರಿ ಎರಡನೇ ವಾರದಲ್ಲಿ ಸಿಯಾಚಿನ್ ಪ್ರವಾಸ ಕೈಗೊಂಡಿದ್ದ ವೇಳೆ ಈ ಉಪಕರಣಗಳು ಮತ್ತು ವೈಯಕ್ತಿಕ ಕಿಟ್ ಗಳನ್ನು ಪರಿಶೀಲಿಸಿದ್ದಾರೆ."ಚಳಿಗಾಲದಿಂದ ವೈಯಕ್ತಿಕ ರಕ್ಷಣೆ ಮತ್ತು ವಿಪರೀತ ಶೀತ ಪರಿಸ್ಥಿತಿಗಳಲ್ಲಿ ಬದುಕುಳಿಯಲು ಸೈನಿಕರಿಗೆ ಸೌಲಭ್ಯ ಕಲ್ಪಿಸಲಾಗಿದೆ.ಸೈನ್ಯಕ್ಕೆ ಹೆಚ್ಚಿನ ಸೌಲಭ್ಯ ಬೇಕೆಂದು ಸೇನೆಯ ಉನ್ನತ ಮೂಲಗಳಿಂದ ಸ್ಪಷ್ಟ ಸೂಚನೆ ನೀಡಲಾಗಿದೆ." ಎಂದು ಮೂಲಗಳು ಹೇಳಿವೆ.
      ಕಿಟ್ ನಲ್ಲಿರುವ ಅತಿ ದುಬಾರಿ ವಸ್ತುವೆಂದರೆ ಅದು ಬಹುಪದರ ಹೊಂದಿರುವ ಸೈನಿಕರ ಚಳಿಗಾಲದ ಉಡುಪು.  ಈ ಉಡುಪಿನ ಪ್ರತಿ ಸೆಟ್ ಗೆ ಸುಮಾರು 28,000 ರೂ. ವೆಚ್ಚ ತಗುಲುತ್ತದೆ. ಅಲ್ಲದೆ ಇದರೊಡನೆ ವಿಶೇಷ ಸ್ಲೀಪಿಂಗ್ ಬ್ಯಾಗ್ ಇದ್ದು ಇದರ ವೆಚ್ಚ ಸುಮಾರು 13,000 ರೂ.ಇದೆ. ಡೌನ್ ಜಾಕೆಟ್ ಮತ್ತು ಸೈನ್ಯದ ವಿಶೇಷ ಕೈಗವಸುಗಳಿಗೆ ಒಟ್ತಾಗಿ 14,000 ರೂ. ಮತ್ತು ವಿವಿಧೋದ್ದೇಶ ಬೂಟುಗಳ ಬೆಲೆ ಸುಮಾರು 12,500 ರೂ. ಇದೆ ಎನ್ನಲಾಗಿದೆ. ಸೈನಿಕರಿಗೆ ಒದಗಿಸಲಾಗುತ್ತಿರುವ ಸಲಕರಣೆಗಳಲ್ಲಿ, ಆಕ್ಸಿಜನ್ ಸಿಲಿಂಡರ್ ಸಹ ಇದ್ದು ಬಿಡಿ ಸಿಲಿಂಡರ್ ಒಂದಕ್ಕೆ 50,000 ರೂ. ವೆಚ್ಚವಾಗುತ್ತ. ಆದರೆ ಅತ್ಯಂತ ಎತ್ತರ ಪ್ರದೇಶದಲ್ಲಿ ಆಮ್ಲಜನಕದ ಮಟ್ಟ ಅತ್ಯಂತ ಕಡಿಮೆ ಇರುವ ಕಾರಣ ಇದರ ಅಗತ್ಯ ಅತ್ಯಂತ ಮುಖ್ಯವಾಗಿದೆ. ಇದಲ್ಲದೆ ಸೈನಿಕರು ಹಿಮಪಾತ ಸಂತ್ರಸ್ತರನ್ನು ಪತ್ತೆಹಚ್ಚಲು ಉಪಕರಣಗಳು ಮತ್ತು ಗ್ಯಾಜೆಟ್‍ಗಳನ್ನು ಸಹ ಪಡೆಯುತ್ತಾರೆ, ಇದರ ಬೆಲೆ ಸುಮಾರು 8,000 ರೂ. ಎಂದು ಹೇಳಲಾಗಿದೆ.
    ಪಾಕಿಸ್ತಾನದಿಂದ ಆಕ್ರಮಣಕ್ಕೆ ಈಡಾಗಿದ್ದ ಸಿಯಾಚಿನ್ ಹಿಮನದಿಯ ಬಳಿ ಭಾರತವು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ 17,000 ಅಡಿಗಳಿಂದ 22,000 ಅಡಿಗಳವರೆಗೆ ಎತ್ತರದಲ್ಲಿ  ತನ್ನ ಸೇನಾಪಡೆಗಳನ್ನು ನಿಯೋಜಿಸಿದೆ.ಅತ್ತ ಪಾಕಿಸ್ತಾನ  ಸಿಯಾಚಿನ್ ಹಿಮನದಿ ಪ್ರದೇಶದ ಸಮೀಪವಿರುವ ಚೀನಿಯರಿಗೆ ತನ್ನ ಭೂಪ್ರದೇಶದ ಮಹತ್ವದ ಭಾಗವನ್ನು ಬಿಟ್ಟುಕೊಟ್ಟಿದೆ. ಹಾಗಾಗಿ ಶತ್ರುಗಳ ದಾಳಿಯನ್ನು ತಡೆಯಲು ಆಯಕಟ್ಟಿನ ಪ್ರದೇಶವಾಗಿರುವ ಈ ಭುಭಾಗ ಮಹತ್ವದ್ದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries