ಕಾಸರಗೋಡು: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕಾಸರಗೋಡು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಮಂಡಿಸಲು ಉದ್ದೇಶಿಸಿದ್ದ ಗೊತ್ತುವಳಿಗೆ ರಾಜ್ಯ ಹೈಕೋರ್ಟು ತಡೆಯಾಜ್ಞೆ ವಿಧಿಸಿದೆ. ಈ ಮೂಲಕ ಜಿಲ್ಲಾಪಂಚಾಯಿತಿ ಆಡಳಿತದ ತೀರ್ಮಾನಕ್ಕೆ ಮುಖಭಂಗವುಂಟಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ವಕೀಲ ಕೆ.ಶ್ರೀಕಾಂತ್ ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಸ್ಥಳೀಯಾಡಳಿತಗಳಲ್ಲಿ ಪ್ರತಿಪಕ್ಷದ ಹಾಜರಾತಿಯನ್ನೂ ಲೆಕ್ಕಿಸದೆ, ಸಂವಿಧಾನಕ್ಕೆ ವಿರುದ್ಧವಾಗಿ ಗೊತ್ತುವಳಿ ಮಂಡಿಸುತ್ತಿರುವ ಆಡಳಿತ ಮತ್ತು ಪ್ರಮುಖ ಪ್ರತಿಪಕ್ಷಗಳ ಏಕಪಕ್ಷೀಯ ಧೋರಣೆಗೆ ಹೈಕೋರ್ಟಿನ ತಡೆಯಾಜ್ಞೆ ಸೂಕ್ತ ಪಾಠವಾಗಿದೆ ಎಂದು ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

