ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಕರ್ಯಾರ್ಥ ನಿರ್ಮಿಸಲಾದ ಲಿಫ್ಟ್‍ನ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಪರೀಕ್ಷಣಾರ್ಥ ಕಾರ್ಯಾರಂಭಿಸಲಾಗಿದೆ.
ಲಿಫ್ಟ್‍ನಲ್ಲಿ ಒಂದು ಬಾರಿ 13 ಮಂದಿಗೆ ಹತ್ತಬಹುದಾಗಿದೆ. ಪ್ರತೀ ಲಿಫ್ಟ್ ನಿರ್ಮಾಣಕ್ಕೆ ತಲಾ 30 ಲಕ್ಷ ರೂ. ನಂತೆ ವ್ಯಯಿಸಲಾಗಿದೆ. ಹೀಗೆ ನಾಲ್ಕು ಲಿಫ್ಟ್‍ಗಳಿಗಾಗಿ ರೈಲ್ವೇ ಇಲಾಖೆ 1.20 ಕೋಟಿ ರೂ. ವ್ಯಯಿಸುತ್ತಿದೆ. ಕಾಸರಗೋಡು ಮಾತ್ರವಲ್ಲ ಹೊಸದುರ್ಗ ರೈಲು ನಿಲ್ದಾಣಗಳಲ್ಲಿ ಎರಡು ಲಿಫ್ಟ್ ನಿರ್ಮಿಸಲಾಗಿದೆ.
ಮಕ್ಕಳ, ಹಿರಿಯ ನಾಗರಿಕರ ಮತ್ತು ಅಶಕ್ತರನ್ನು ಪರಿಗಣಿಸಿ ಅವರ ಸೌಕರ್ಯಕ್ಕಾಗಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಲಿಫ್ಟ್ ಸೌಕರ್ಯ ಏರ್ಪಡಿಸಬೇಕೆಂದು ಮಾನವ ಹಕ್ಕು ಆಯುಕ್ತ ಕೆ.ಮೋಹನ್ ಕುಮಾರ್ ರೈಲ್ವೇ ಇಲಾಖೆಯೊಂದಿಗೆ ಆಗ್ರಹಿಸಿದ್ದರು. ಅದನ್ನು ಪರಿಗಣಿಸಿ ಕಾಸರಗೋಡು ಮತ್ತು ಹೊಸದುರ್ಗ ರೈಲು ನಿಲ್ದಾಣಗಳಲ್ಲಿ ಲಿಫ್ಟ್ ಸೌಕರ್ಯ ಏರ್ಪಡಿಸಲಾಗಿದೆ. ಇದೇ ವೇಳೆ ಈ ಲಿಫ್ಟ್‍ಗೆ ಆಪರೇಟರನ್ನು ನೇಮಿಸಲಾಗಿಲ್ಲ. ಆದುದರಿಂದಾಗಿ ಅದನ್ನು ಪ್ರಯಾಣಿಕರೇ ನಿಯಂತ್ರಿಸಬೇಕಾಗಿ ಬರಲಿದೆ.

