ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರೈಲ್ವೆ ಮಂಡಳಿ ಆ.12 ವರೆಗೆ ಎಲ್ಲಾ ಪ್ರಯಾಣಿಕ ರೈಲುಗಳನ್ನು ಸ್ಥಗಿತಗೊಳಿಸಿದೆ. ಜೂ.25 ರಂದು ರಾತ್ರಿ ಈ ಘೋಷಣೆ ಹೊರಬಿದ್ದಿದ್ದು, ಮೇಲ್/ ಎಕ್ಸ್ ಪ್ರೆಸ್, ಪ್ಯಾಸೆಂಜರ್, ಸಬ್ ಅರ್ಬನ್ ರೈಲುಗಳ ಸೇವೆಯನ್ನು ಅನ್ ಲಾಕ್ 1.0 ನಡುವೆಯೇ ಆ.12 ವರೆಗೆ ಸ್ಥಗಿತಗೊಳಿಸುವುದಾಗಿ ರೈಲ್ವೆ ಮಂಡಳಿ ಘೋಷಿಸಿದೆ. ಆದರೆ ವಿಶೇಷ ರೈಲುಗಳ ಸಂಚಾರದಲ್ಲಿ ಯಥಾಸ್ಥಿತಿ ಇರಲಿದೆ.
01.07.2020 ರಿಂದ 12.08.2020 ರ ವರೆಗೆ ಪ್ರಯಾಣಿಕರು ಕಾಯ್ದಿರಿಸಿದ್ದ ಟಿಕೆಟ್ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಇದೇ ವೇಳೆ ಏ.14 ರವರೆಗೆ ಕಾಯ್ದಿರಿಸಲಾಗಿದ್ದ ಟಿಕೆಟ್ ನ ಹಣವನ್ನು ಸಂಪೂರ್ಣ ಮರುಪಾವತಿ ಮಾಡುವುದಾಗಿಯೂ ರೈಲ್ವೆ ಮಂಡಳಿ ಮಾಹಿತಿ ನೀಡಿದೆ.
ಏ.14 ರಂದು ಹಾಗೂ ಅದಕ್ಕಿಂತ ಮೊದಲು ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಿದವರಿಗೆ ಸಂಪೂರ್ಣ ಹಣ ಮರುಪಾವತಿ ಮಾಡುವುದಾಗಿಯೂ ರೈಲ್ವೆ ಇಲಾಖೆ ತಿಳಿಸಿದೆ. ಮಾರ್ಚ್.25 ರಂದು ಕೊರೋನಾ ತಡೆಗೆ ಲಾಕ್ ಡೌನ್ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಮೇ.16 ರಂದು ರೈಲು ಸೇವೆಗಳು ಪ್ರಾರಂಭವಾಗಿದ್ದವು.It has been decided that regular time-tabled passenger services including Mail/Express, passenger and suburban services stand cancelled up to 12.08.2020: Railway Board pic.twitter.com/Pt1EIreC5y
It has been decided that regular time-tabled passenger services including Mail/Express, passenger and suburban services stand cancelled up to 12.08.2020: Railway Board



