ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲಾರಂಭ ಅಸಾಧ್ಯವಾಗಿರುವುದರಿಂದ ವಿದ್ಯಾರ್ಥಿಗಳ ಕಲಿಕಾಸಕ್ತಿ ಹೆಚ್ಚಿಸಲು ಮತ್ತು ಕಲಿಕೆಯಿಂದ ವಂಚಿತರಾಗದಿರಲು ರಾಜ್ಯ ಸರ್ಕಾರವು ಆರಂಭಿಸಿರುವ ಕೈಟ್ ವಿಕ್ಟರ್ಸ್ ಆನ್ ಲೈನ್ ಶಿಕ್ಷಣದ ಕನ್ನಡ ಅವತರಣಿಕೆ ಇದೀಗ ಲಭ್ಯವಾಗುತ್ತಿದ್ದು, ಗಡಿನಾಡಿನ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
ಆರಂಭದಲ್ಲಿ ಮಲೆಯಾಳಂ ಭಾಷೆಯಲ್ಲಿ ಮಾತ್ರ ಲಭ್ಯವಾಗುತ್ತಿದ್ದ ಆನ್ ಲೈನ್ ಶಿಕ್ಷಣ ಸಮರಸ ಸುದ್ದಿ ಸಹಿತ ಅನೇಕ ಸುದ್ದಿ ಮಾಧ್ಯಮಗಳು, ವಿವಿಧ ಕನ್ನಡ ಪರ ಸಂಘಟನೆ, ವ್ಯಕ್ತಿಗಳ ಒತ್ತಾಯದ ಫಲವಾಗಿ ಕನ್ನಡದಲ್ಲೂ ಕಳೆದ ಎರಡು ವಾರಗಳಿಂದ ಬಿತ್ತರಗೊಳ್ಳುತ್ತಿದೆ.
ಪ್ರಸ್ತುತ ಸಮರಸ ಸುದ್ದಿಯ ಜಾಲತಾಣದ ಮೂಲಕವೂ ಆಸಕ್ತ ವಿದ್ಯಾರ್ಥಿಗಳು ಕೈಟ್ ಕನ್ನಡ ಆನ್ ಲೈನ್ ಶಿಕ್ಷಣವನ್ನು ವೀಕ್ಷಿಸಬಹುದು. ಸಹೃದಯ ಸಮರಸ ಓದುಗರು ಹೆಚ್ಚು ಜನರಿಗೆ ಇದನ್ನು ತಲಪಿಸಿ ಕನ್ನಡದ ಎಳೆಯ-ಯುವ ಮನಸ್ಸುಗಳಿಗೆ ಶಿಕ್ಷಣ ಸೌಲಭ್ಯ ದೊರಕಿಸಲು ಸಹಕರಿಸುವಿರೆಂದು ಆಶಿಸುವೆವು.
ಸಂಪಾದಕಿ
ಅಕ್ಷತಾ ಪಿ.ಭಟ್/ ಸಂಪಾದಕ ಮಂಡಳಿ


