ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಒಬ್ಬರಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರು ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ದುಬಾಯಿಯಿಂದ ಆಗಮಿಸಿದ್ದ, ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿ 54 ವರ್ಷದ ವ್ಯಕ್ತಿ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ನಿವಾಸಿ 62 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ, ದುಬಾಯಿಯಿಂದ ಆಗಮಿಸಿದ್ದ ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ 26 ವರ್ಷದ ನಿವಾಸಿ ರೋಗದಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 5863 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5436 ಮಂದಿ, ಸಾಂಸ್ಥಿಕ ನಿಗಾದಲ್ಲಿ 427 ಮಂದಿ ಇದ್ದಾರೆ. ನೂತನವಾಗಿ 455 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 214 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 461 ಮಂದಿಯ ಫಲಿತಾಂಶ ಲಭಿಸಿಲ್ಲ. 304 ಮಂದಿ ತನ್ನ ನಿಗಾ ಅವ„ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 150 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶುಕ್ರವಾರ 150 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಪಾಲ್ಘಾಟ್-23, ಆಲಪ್ಪುಳ-21, ಕೋಟ್ಟಯಂ-18, ಮಲಪ್ಪುರಂ-16, ಕೊಲ್ಲಂ-16, ಕಣ್ಣೂರು-13, ಎರ್ನಾಕುಳಂ-9, ತಿರುವನಂತಪುರ-7, ತೃಶ್ಶೂರು-7, ಕಲ್ಲಿಕೋಟೆ-7, ವಯನಾಡು-5, ಪತ್ತನಂತಿಟ್ಟ-4, ಇಡುಕ್ಕಿ-2, ಕಾಸರಗೋಡು-2 ಎಂಬಂತೆ ರೋಗ ಬಾಧಿಸಿದೆ.
ಕಣ್ಣೂರು ಜಿಲ್ಲೆಯಲ್ಲಿ ರೋಗ ಬಾಧಿತರಲ್ಲಿ 6 ಮಂದಿ ಸಿ.ಐ.ಎಸ್.ಎಫ್. ನೌಕರರು. 3 ಮಂದಿ ಆರ್ಮಿ ಡಿ.ಎಸ್.ಸಿ. ಕ್ಯಾಂಟೀನ್ ಸ್ಟಾಫ್ ಆಗಿದ್ದಾರೆ. ರೋಗ ಬಾಧಿತ ಸಿ.ಐ.ಎಸ್.ಎಫ್. ನೌಕರರಲ್ಲಿ ಇಬ್ಬರು ಏರ್‍ಪೆÇೀರ್ಟ್ ಡ್ಯೂಟಿಯಲ್ಲಿದ್ದವರು.
ರೋಗ ಬಾಧಿತರಲ್ಲಿ 91 ಮಂದಿ ವಿದೇಶದಿಂದ ಹಾಗು 48 ಮಂದಿ ಇತರ ರಾಜ್ಯಗಳಿಂದ ಬಂದವರು. 10 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಪಾಲ್ಘಾಟ್ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ರೋಗ ಬಾಧಿಸಿದೆ. ಇದೇ ಸಂದರ್ಭದಲ್ಲಿ 65 ಮಂದಿ ಗುಣಮುಖರಾಗಿದ್ದಾರೆ.
ಮಲಪ್ಪುರಂ-18(ಪಾಲ್ಘಾಟ್-2 ಮತ್ತು ಕಲ್ಲಿಕೋಟೆ-1), ತೃಶ್ಶೂರು-15, ಕೊಲ್ಲಂ-10, ಕಲ್ಲಿಕೋಟೆ-10, ಇಡುಕ್ಕಿ-5, ಕೋಟ್ಟಯಂ-2, ಕಣ್ಣೂರು(ಕಾಸರಗೋಡು-1) ಜಿಲ್ಲೆಯಲ್ಲಿ ಒಬ್ಬರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 1846 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2006 ಮಂದಿ ಗುಣಮುಖರಾಗಿದ್ದಾರೆ. 163944 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 161547 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 2397 ಮಂದಿ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. ಶುಕ್ರವಾರ ಶಂಕಿತ 312 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 2,09,456 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 4510 ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ.
ಮಾಸ್ಕ್ ಧರಿಸದ 275 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 275 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂ„ಸಿ ಈ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 8792 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 57 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 57 ಕೇಸುಗಳನ್ನು ದಾಖಲಿಸಲಾಗಿದೆ. 83 ಮಂದಿಯನ್ನು ಬಂಧಿಸಲಾಗಿದ್ದು, ಮೂರು ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ 4, ಕಾಸರಗೋಡು 6, ವಿದ್ಯಾನಗರ 6, ಬದಿಯಡ್ಕ 5, ಬೇಡಗಂ 2, ಆದೂರು 2, ಮೇಲ್ಪರಂಬ 3, ಬೇಕಲ 4, ಅಂಬಲತ್ತರ 1, ಹೊಸದುರ್ಗ 6, ನೀಲೇಶ್ವರ 4, ಚಂದೇರ 2, ಚೀಮೇನಿ 1, ವೆಳ್ಳರಿಕುಂಡ್ 4, ಚಿತ್ತಾರಿಕಲ್ 3, ರಾಜಪುರಂ 3 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿ ಈ ವರೆಗೆ ಒಟ್ಟು 2814 ಕೇಸುಗಳನ್ನು ದಾಖಲಿಸಲಾಗಿದೆ. 3552 ಮಂದಿಯನ್ನು ಬಂಧಿಸಲಾಗಿದೆ. 1166 ವಾಹನಗಳನ್ನು ವಶಪಡಿಸಲಾಗಿದೆ.


