ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮೂವರಿಗೆ ಕೋವಿಡ್ ನೆಗೆಟಿವ್ ಆಗಿದೆ. ರೋಗ ಬಾಧಿತರೆಲ್ಲರೂ ವಿದೇಶದಿಂದ ಬಂದವರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕುವೈತ್‍ನಿಂದ ಆಗಮಿಸಿದ್ದ ಪನತ್ತಡಿ ಗ್ರಾಮ ಪಂಚಾಯತ್ ನಿವಾಸಿ 35 ವರ್ಷದ ವ್ಯಕ್ತಿ, ವಲಿಯಪರಂಬ ಪಂಚಾಯತ್ ನಿವಾಸಿ 48 ವರ್ಷದ ಮಹಿಳೆ, ಸಾರ್ಜಾದಿಂದ ಬಂದ ಉದುಮ ಗ್ರಾಮ ಪಂಚಾಯತ್ ನಿವಾಸಿ 32 ವರ್ಷದ ವ್ಯಕ್ತಿ, ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 40 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ 25 ವರ್ಷದ ಅಜಾನೂರು ಗ್ರಾಮ ಪಂಚಾಯತ್ ನಿವಾಸಿ ಮಹಿಳೆ, ಚೆಮ್ನಾಡ್ ಗ್ರಾಮ ಪಂಚಾಯತ್‍ನ 45 ವರ್ಷದ ವ್ಯಕ್ತಿಗೆ ಸೋಂಕು ಖಚಿತಗೊಂಡಿದೆ.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮೂವರಿಗೆ ಕೋವಿಡ್ ನೆಗೆಟಿವ್ ಆಗಿದೆ. ಕುವೈತ್‍ನಿಂದ ಬಂದಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 34 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ 26 ವರ್ಷದ ಮಹಿಳೆ, ಖತಾರ್ ನಿಂದ ಆಗಮಿಸಿದ್ದ ಪಡನ್ನ ಗ್ರಾಮ ಪಂಚಾಯತ್ ನಿವಾಸಿ ಮಹಿಳೆಗೆ ಕೋವಿಡ್ ಪಾಸಿಟಿವ್ ಆಗಿದೆ.
ಜಿಲ್ಲೆಯಲ್ಲಿ 5464 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5082 ಮಂದಿ, ಸಾಂಸ್ಥಿಕ ನಿಗಾದಲ್ಲಿ 382 ಮಂದಿ ನಿಗಾದಲ್ಲಿದ್ದಾರೆ. ನೂತನವಾಗಿ 552 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 100 ಮಂದಿ ಸ್ಯಾಂಪಲ್ ನೂತನವಾಗಿ ತಪಾಸಣೆಗೆ ಕಳುಹಿಸಲಾಗಿದೆ. 235 ಮಂದಿಯ ಫಲಿತಾಂಶ ಲಭಿಸಿಲ್ಲ.
ಕೇರಳದಲ್ಲಿ 152 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಬುಧವಾರ 152 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 81 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 98 ಮಂದಿ ವಿದೇಶದಿಂದ ಬಂದವರು. 46 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದಿಂದ 8 ಮಂದಿಗೆ ರೋಗ ಬಾಧಿಸಿದೆ.
ಪತ್ತನಂತಿಟ್ಟ -25, ಕೊಲ್ಲಂ-18, ಕಣ್ಣೂರು-17, ಪಾಲ್ಘಾಟ್-16, ತೃಶ್ಶೂರು-15, ಆಲಪ್ಪುಳ-15, ಮಲಪ್ಪುರಂ-10, ಎರ್ನಾಕುಳಂ-8, ಕೋಟ್ಟಯಂ-7, ಇಡುಕ್ಕಿ-6, ಕಾಸರಗೋಡು-6, ತಿರುವನಂತಪುರ-4, ಕಲ್ಲಿಕೋಟೆ-3, ವಯನಾಡು-2 ಎಂಬಂತೆ ರೋಗ ಬಾಧಿಸಿದೆ.
ಇದು ವರೆಗೆ ಕೇರಳದಲ್ಲಿ ರೋಗ ಬಾಧಿಸಿದವರ ಸಂಖ್ಯೆ 3603. ಪ್ರಸ್ತುತ 1691 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 154759 ಮಂದಿ ನಿಗಾದಲ್ಲಿದ್ದಾರೆ. ಇದರಲ್ಲಿ 2282 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶಂಕಿತ 288 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 148827 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 4005 ರಷ್ಟು ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ.
ಕೊಲ್ಲಂ-1, ಪತ್ತನಂತಿಟ್ಟ-1, ಆಲಪ್ಪುಳ-13, ಕೋಟ್ಟಯಂ-3, ಇಡುಕ್ಕಿ-2, ಕಲ್ಲಿಕೋಟೆ-35, ಎರ್ನಾಕುಳಂ-4, ತೃಶ್ಶೂರು-4, ಪಾಲ್ಘಾಟ್-1, ಮಲಪ್ಪುರಂ-7, ಕಣ್ಣೂರು-10 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 233 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 233 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ 8238 ಕೇಸುಗಳು ದಾಖಲಾಗಿವೆ.
ಲಾಕ್‍ಡೌನ್ ಆದೇಶ ಉಲ್ಲಂಘನೆ : 6 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6 ಕೇಸುಗಳನ್ನು ದಾಖಲಿಸಲಾಗಿದೆ. 7 ಮಂದಿಯನ್ನು ಬಂ„ಸಲಾಗಿದ್ದು, ಒಂದು ವಾಹನ ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 2, ಕಾಸರಗೋಡು 1, ಬೇಕಲ 1, ಚೀಮೇನಿ 1, ಬದಿಯಡ್ಕ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 2697 ಕೇಸುಗಳನ್ನು ದಾಖಲಿಸಲಾಗಿದೆ. 3398 ಮಂದಿಯನ್ನು ಬಂಧಿಸಲಾಗಿದ್ದು, 1160 ವಾಹನಗಳನ್ನು ವಶಪಡಿಸಲಾಗಿದೆ.
ಜಿಲ್ಲೆಯಲ್ಲಿ ಸ್ಪೆಷಲ್ ಡ್ರೈವ್ ಆರಂಭ : ಕೋವಿಡ್ 19 ಸಮೂಹ ವ್ಯಾಪನವಾಗುತ್ತಿರುವ ಭೀತಿ ಎದುರಾಗಿದ್ದು, ಇದನ್ನು ತಡೆಗಟ್ಟಲು ವಿವಿಧ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಪೆಷಲ್ ಡ್ರೈವ್ ಆರಂಭಿಸಲಾಗಿದೆ. ಜೂ.25 ರಂದು ರಾತ್ರಿ ವರೆಗೂ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ವಾಹನ ತಪಾಸಣೆ ಚುರುಕುಗೊಳಿಸಲಾಗಿದೆ. ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶಿಸಲಾಗಿದೆ. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ.



