ನವದೆಹಲಿ: ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ರೋಗದ ವಿರುದ್ಧ ಸಂಪೂರ್ಣ ಪ್ರಯತ್ನ ಹಾಕಿ ಹೋರಾಟ ಮಾಡುತ್ತಿವೆ. ವೈದ್ಯಕೀಯ ವ್ಯವಸ್ಥೆಯ ಬಹುಪಾಲು ಈ ಕೋವಿಡ್-19 ವಿರುದ್ಧದ ಹೋರಾಟಕ್ಕೇ ಮೀಸಲಾಗಿದೆ. ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಈ ವಿಚಾರದಲ್ಲಿ ಜಗತ್ತಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕೋವಿಡ್-19 ರೋಗವೊಂದಕ್ಕೇ ಎಲ್ಲರೂ ತಲೆಕೆಡಿಸಿಕೊಳ್ಳುವುದು ತರವಲ್ಲ. ಬೇರೆ ರೋಗಿಗಳಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದರು.
ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಲೇ ನಮ್ಮ ವೈದ್ಯಕೀಯ ವ್ಯವಸ್ಥೆ ಪ್ರಬಲಗೊಳ್ಳುತ್ತದೆ. ಇದರಿಂದ ಮುಂದೆ ಇಂಥ ರೋಗ ಬಂದರೆ ಎದುರಿಸಲು ಸುಲಭಸಾಧ್ಯವಾಗುತ್ತದೆ. ಹಾಗೆಯೇ, ಕೋವಿಡ್-19 ಈ ವಿಶ್ವದ ಕೊನೆಯ ಸಾಂಕ್ರಾಮಿಕ ರೋಗವಲ್ಲ. ರೋಗಗಳು ಬರುತ್ತಲೇ ಇರುತ್ತವೆ. ಅವುಗಳನ್ನ ಸಮರ್ಥವಾಗಿ ಎದುರಿಸಬಹುದು ಎಂದು ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ತಿಳಿಸಿದರು.