ತಿರುವನಂತಪುರ: ರಾಜ್ಯದಲ್ಲಿ ಪಠ್ಯ ಪುಸ್ತಕಗಳನ್ನು ಜೂ.20ರೊಳಗಾಗಿ ಆಯಾ ಶಾಲೆಗಳಿಗೆ ತಲುಪಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಆದೇಶ ನೀಡಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕಗಳ ಮುದ್ರಣ ವಿಳಂಬಗೊಂಡಿತ್ತು. ಅದು ಈಗ ಪುನರಾರಂಭಗೊಂಡಿದೆ. ತಿರುವನಂತಪುರ ಕಾಕನಾಡ್‍ನಲ್ಲಿರುವ ಕೇರಳ ಬುಕ್ಸ್ ಆ್ಯಂಡ್ ಪಬ್ಲಿಷಿಂಗ್ ಸೊಸೈಟಿಯಲ್ಲಿ ಪಠ್ಯ ಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. 2.82 ಕೋಟಿ ಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. ಮುದ್ರಣ ಜೂ.15ರೊಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇರಿಸಲಾಗಿದೆ. ವಿವಿಧ ರೀತಿಯ 288 ಪಠ್ಯ ಪುಸ್ತಕಗಳನ್ನು ಮುದ್ರಿಸಲಾಗುತ್ತದೆ.
ಈ ವರ್ಷದ ಶೈಕ್ಷಣಿಕ ವರ್ಷ ಆನ್‍ಲೈನ್ ತರಗತಿಯೊಂದಿಗೆ ಜೂ.1ರಿಂದಲೇ ಆರಂಭಗೊಂಡಿದ್ದರೂ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಈ ತನಕ ಕೈ ಸೇರಲಿಲ್ಲ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಪಠ್ಯ ಪುಸ್ತಕಗಳ ವಿತರಣೆ ಆಯಾ ಶಾಲೆಗಳಿಗೆ ತಲುಪಿಸಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ 1ರಿಂದ 7ನೇ ತರಗತಿ ವರೆಗಿನ ಪಠ್ಯ ಪುಸ್ತಕಗಳ ವಿತರಣೆ ಆಯಾ ಶಾಲೆಗಳಿಗೆ ತಲುಪಿಸಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ 1ರಿಂದ 7ನೇ ತರಗತಿ ತನಕದ ಪಠ್ಯ ಪುಸ್ತಕಗಳ ವಿತರಣೆ ಈಗಾಗಲೇ ನಡೆದಿದೆ.
ರಾಜ್ಯದಲ್ಲಿ 3294 ಶಾಲೆಗಳಿವೆ. ಶಾಲಾ ಸೊಸೈಟಿಗಳ ಮೂಲಕ ಪುಸ್ತಕಗಳ ವಿತರಣೆ ನಡೆಯುತ್ತಿವೆ.



