ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ನಿನ್ನೆ ಒಂದೇ ದಿನ 2137 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ದಾಖಲೆಯ ಗರಿಷ್ಠ 2137 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಆ ಮೂಲಕ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 36,824ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ದೆಹಲಿಯಲ್ಲಿ 129 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 1214ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ ದೆಹಲಿಯಲ್ಲಿ 667 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಚೇತರಿಕೆ ಕಂಡ ಸೋಂಕಿತರ ಸಂಖ್ಯೆ 13398ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರಸ್ತುತ 22212 ಸಕ್ರಿಯ ಪ್ರಕರಣಗಳಿವೆ.
ದೆಹಲಿ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಅನ್ವಯ 9558 ಕೋವಿಡ್-19 ಬೆಡ್ ಗಳಿದ್ದು, 5361 ಬೆಡ್ ಗಳನ್ನು ಸೋಂಕಿತರಿಗೆ ನೀಡಲಾಗಿದೆ. 4197 ಬೆಡ್ ಗಳು ಖಾಲಿ ಇವೆ. ಅಂತೆಯೇ 598 ವೆಂಟಿಲೇಟರ್ ಬೆಡ್ ಗಳಿದ್ದು, 345 ಬೆಡ್ ಗಳನ್ನು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ನೀಡಲಾಗಿದೆ. ಇನ್ನೂ 253 ಬೆಡ್ ಗಳು ಖಾಲಿ ಉಳಿದಿವೆ.
Delhi sees another highest single day spike with 2137 new #Covid_19 cases registered on Thursday.
Above 36K cumulative cases while active cases are more than 22K.
71 deaths past 24 hours, 58 from backlog. Total 129 fatalities added.
667 recovered @NewIndianXpress #CoronaVirus
See Somrita Ghosh's other Tweets



