ಇಸ್ಲಾಮಾಬಾದ್: ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ತಾರ್ಪುರ ಕಾರಿಡಾರ್'ನ್ನು ಜೂ.29 ರಂದು ತೆರೆಯಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಪಾಕಿಸ್ತಾನ ಶನಿವಾರ ತಿಳಿಸಿದೆ.
ಈ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವ ಶಾ.ಮಹಮ್ಮೂದ್ ಖುರೇಷಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ವಿಶ್ವದಾದ್ಯಂತ ಧಾರ್ಮಿಕ ಕೇಂದ್ರಗಳು ಪುರರಾರಂಭಗೊಳ್ಳುತ್ತಿದ್ದಂತೆ, ಕರ್ತಾರ್ಪುರ ಕಾರಿಡಾರ್'ನ್ನು ತೆರೆಯಲು ಪಾಕಿಸ್ದಾನ ಸಿದ್ಥತೆ ನಡೆಸುತ್ತಿದೆ. ಮಹಾರಾಜ ರಂಜೀತ್ ಸಿಂಗ್ ಅವರ ಮರಣ ವರ್ಷಾಚರಣೆಯ ಅಂಗವಾಗಿ ಜೂ.29,2020ರಂದು ಎಲ್ಲಾ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ಪುರ ಸಾಹಿಬ್ ಕಾರಿಡಾರ್'ನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ತಾರ್ಪುರ ಕಾರಿಡಾರ್'ನ್ನು ಮಾರ್ಚ್16 ರಿಂದ ಭಾರತ ಬಂದ್ ಮಾಡಿತ್ತು. ಇದರಂತೆ ಪಾಕಿಸ್ತಾನ ಕೂಡ ತನ್ನ ಪ್ರಜೆಗಳು ಈ ಮಾರ್ಗದಲ್ಲಿ ಸಂಚರಿಸುವುದಕ್ಕೆ ನಿಷೇಧ ಹೇರಿತ್ತು.
As places of worship open up across the world, Pakistan prepares to reopen the Kartarpur Sahib Corridor for all Sikh pilgrims, conveying to the Indian side our readiness to reopen the corridor on 29 June 2020, the occasion of the death anniversary of Maharaja Ranjeet Singh.
953 people are talking about this



