ಜಿನೆವಾ: ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ತನ್ನ ರಣಕೇಕೆಯನ್ನು ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 70 ಲಕ್ಷ ಗಡಿದಾಟಿದೆ. ಅಲ್ಲದೆ, 4.27 ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 137,526 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 4,281 ಮಂದಿದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 7,690,708ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 427,630 ತಲುಪಿದೆ ಎಂದು ತಿಳಿದುಬಂದಿದೆ.
ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿ ಕೊರೋನಾ ತನ್ನ ರೌದ್ರನರ್ತನ ಹೆಚ್ಚಾಗಿದೆ. ಈ ವರೆಗೂ ಆ ರಾಷ್ಟ್ರದಲ್ಲಿ 20 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 114,466 ಮಂದಿ ಬಲಿಯಾಗಿದ್ದಾರೆ.


