ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 6 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇವರಲ್ಲಿ 7 ಮಂದಿ ವಿದೇಶದಿಂದ ಹಾಗು ಇಬ್ಬರು ಮುಂಬೈಯಿಂದ ಬಂದವರು.
30 ವರ್ಷದ ಉದುಮ ನಿವಾಸಿ, 33 ವರ್ಷದ ಚೆರುವತ್ತೂರು ನಿವಾಸಿ, 51 ವರ್ಷದ ಪಳ್ಳಿಕೆರೆ ನಿವಾಸಿ, 30 ವರ್ಷದ ಕಾರಡ್ಕ ನಿವಾಸಿ, 45 ವರ್ಷದ ಕರಿಂದಳಂ ನಿವಾಸಿ, 26 ವರ್ಷದ ಚೆಂಗಳ ನಿವಾಸಿ, 62 ವರ್ಷದ ಕಾಂಞಂಗಾಡ್ ನಗರಸಭಾ ನಿವಾಸಿ ವಿದೇಶದಿಂದ ಬಂದವರು. 31 ವರ್ಷದ ಕಾರಡ್ಕ ನಿವಾಸಿ ಮತ್ತು 47 ವರ್ಷದ ಕುಂಬಳೆ ನಿವಾಸಿ ಮುಂಬೈಯಿಂದ ಬಂದವರು.
ಆರು ಮಂದಿ ಗುಣಮುಖರಾಗಿದ್ದಾರೆ. 57 ವರ್ಷದ ಪುತ್ತಿಗೆ ನಿವಾಸಿ, 52 ವರ್ಷದ ಕುಂಬ್ಡಾಜೆ ನಿವಾಸಿ, 54 ವರ್ಷದ ವರ್ಕಾಡಿ ನಿವಾಸಿ, 40 ವರ್ಷದ ಮೀಂಜ ನಿವಾಸಿ, 58 ವರ್ಷದ ಉದುಮ ನಿವಾಸಿ, 32 ವರ್ಷದ ಕುಂಬಳೆ ನಿವಾಸಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 85 ಮಂದಿಗೆ ಸೋಂಕು :
ಕೇರಳದಲ್ಲಿ ಶನಿವಾರ 85 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮಲಪ್ಪುರ ಜಿಲ್ಲೆಯಲ್ಲಿ 15, ಕಣ್ಣೂರು-14, ಕಲ್ಲಿಕೋಟೆ-12, ಆಲಪ್ಪುಳ-9, ಕಾಸರಗೋಡು-9, ಪಾಲ್ಘಾಟ್-8, ಎರ್ನಾಕುಳಂ-7, ಇಡುಕ್ಕಿ-4, ತೃಶ್ಶೂರು-4, ಪತ್ತನಂತಿಟ್ಟ-1, ಕೋಟ್ಟಯಂ-1, ವಯನಾಡು-1 ಎಂಬಂತೆ ರೋಗ ಬಾ„ಸಿದೆ.
ಇವರಲ್ಲಿ 53 ಮಂದಿ ವಿದೇಶದಿಂದ ಬಂದವರು. 18 ಮಂದಿ ಇತರ ರಾಜ್ಯಗಳಿಂದ ಬಂದವರು. 10 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ನಾಲ್ಕು ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ 46 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು ಜಿಲ್ಲೆ-10, ಪಾಲ್ಘಾಟ್-9, ಮಲಪ್ಪುರಂ-7, ಕಾಸರಗೋಡು-6, ತಿರುವನಂತಪುರ-4, ತೃಶ್ಶೂರು-3, ಕೋಟ್ಟಯಂ-2, ಕಲ್ಲಿಕೋಟೆ-2, ಪತ್ತನಂತಿಟ್ಟ-1, ಇಡುಕ್ಕಿ-1, ವಯನಾಡು-1 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 1342 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1045 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 2,35,418 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 2,33,429 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1989 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಶನಿವಾರ ಶಂಕಿತ 223 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದಲ್ಲಿ 117 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ್ ಧರಿಸದ 257 ಮಂದಿ ವಿರುದ್ಧ ಕೇಸು : ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 257 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ಇದು ವರೆಗೆ 6194 ಮಂದಿ ವಿರುದ್ಧ ಕೇಸು ದಾಖಲಿಸಿ ದಂಡ ವಿಧಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : ಮೂವರ ಬಂಧನ : ಲಾಕ್‍ಡೌನ್ ಉಲ್ಲಂಘನೆ ಸಂಬಂಧ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಹೊಸದುರ್ಗ-1, ನೀಲೇಶ್ವರ-1 ಮತ್ತು ವೆಳ್ಳರಿಕುಂಡು-1 ಎಂಬಂತೆ ಕೇಸು ದಾಖಲಿಸಲಾಗಿದೆ. ಮೂವರನ್ನು ಬಂ„ಸಿದ್ದು, ಎರಡು ವಾಹನಗಳನ್ನು ವಶಪಡಿಸಲಾಗಿದೆ. ಇದು ವರೆಗೆ 2620 ಕೇಸುಗಳನ್ನು ದಾಖಲಿಸಲಾಗಿದ್ದು, 3292 ಮಂದಿಯನ್ನು ಬಂ„ಸಲಾಗಿದೆ. 1126 ವಾಹನಗಳನ್ನು ವಶಪಡಿಸಲಾಗಿದೆ.


