HEALTH TIPS

ಭಾರತ, ಚೀನಾ, ದಕ್ಷಿಣ ಆಫ್ರಿಕಾಕ್ಕೆ ಸಂಬಂಧಪಟ್ಟ ಆತಂಕಕಾರಿ ಸುದ್ದಿ ಇದು; ಅಧ್ಯಯನವೊಂದರ ವರದಿ

                  ನವದೆಹಲಿ: ವಿಶ್ವದ ಬಹುತೇಕ ರಾಷ್ಟ್ರಗಳು ಕಳೆದ 5-6ತಿಂಗಳಿಂದ ಕೊವಿಡ್​-19ನಿಂದ ತತ್ತರಿಸುತ್ತಿವೆ. ಕರೊನಾ ಸೋಂಕಿನಿಂದಾಗಿ ಆಸ್ಪತ್ರೆಗಳೆಲ್ಲ ತುಂಬುತ್ತಿವೆ. ಬೇರೆ ರೋಗಿಗಳೂ ಸರಿಯಾಗಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಕೊವಿಡ್​-19ನಿಂದ ಪ್ರತಿದಿನ ಜನರು ಸಾಯುತ್ತಿದ್ದಾರೆ.
          ಈ ಮಧ್ಯೆ ಯುರೋಪಿಯನ್ ರೆಸ್ಪಿರೆಟರಿ ಜರ್ನಲ್​ವೊಂದು ಆತಂಕಕಾರಿ ವರದಿಯನ್ನು ಪ್ರಕಟಿಸಿದೆ. ಇದು ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಸಂಬಂಧಪಟ್ಟಂಥ ಒಂದು ಅಧ್ಯಯನ ವರದಿಯಾಗಿದೆ.
     ಲಂಡನ್​ ಸ್ಕೂಲ್​ ಆಫ್​ ಹೈಜೀನ್​ ಆ್ಯಂಡ್​ ಟ್ರೊಪಿಕಲ್ ಮೆಡಿಸಿನ್​ ಮ್ತು ಲಾಂಕೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಕೊವಿಡ್​-19 ಸಾಂಕ್ರಾಮಿಕದಿಂದಾಗಿ ಸುಮಾರು 95,000 ಕ್ಷಯ ರೋಗಿಗಳು ಸಾಯುತ್ತಾರೆ ಎಂಬುದಾಗಿ ಈ ಜರ್ನಲ್​ ವರದಿ ಮಾಡಿದೆ. 
      ಕರೊನಾದಿಂದಾಗಿ ಉಳಿದ ರೋಗಗಳಿಗೆ ನೀಡಲಾಗುವ ಆರೋಗ್ಯ ಸೇವೆಗೆ ಸ್ವಲ್ಪ ಮಟ್ಟಿಗೆ ತಡೆಯುಂಟಾಗಿದೆ. ಅದರಲ್ಲೂ ಕ್ಷಯವೂ ಕೂಡ ಶ್ವಾಸಕೋಶ ಸಂಬಂಧಿ ರೋಗ. ಕ್ಷಯಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಆ ರೋಗಿ ಸಾಯುತ್ತಾನೆ. ಕೊವಿಡ್​-19ನಿಂದಾಗಿ ಹೆಚ್ಚಿನ ಗಮನವೆಲ್ಲ ಇದರ ಮೇಲೆ ನೆಟ್ಟಿದೆ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಶುರುವಾದ ಕೂಡಲೇ ಕೊವಿಡ್​ ಟೆಸ್ಟ್​ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಬಹುತೇಕ ಬೆಡ್​ಗಳು, ಐಸಿಯುಗಳು, ಆಕ್ಸಿಜನ್​ಗಳೆಲ್ಲವೂ ಕೊವಿಡ್​-19 ರೋಗಿಗಳಿಂದ ತುಂಬಿ ಹೋಗಿದೆ. ಇದೆಲ್ಲದರ ಪರಿಣಾಮ ಕ್ಷಯ ರೋಗವನ್ನು ಪತ್ತೆಹಚ್ಚುವಲ್ಲಿ ವಿಳಂಬ ಆಗಬಹುದು ಹಾಗೂ ಚಿಕಿತ್ಸೆ ನೀಡುವಲ್ಲೂ ತಡ ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೊವಿಡ್​-19 ಸೋಂಕು ಕ್ಷಯ ರೋಗಿಗಳ ಜೀವಕ್ಕೆ ಕಂಟಕವಾಗುವ ಸಾಧ್ಯತೆ ಇದೆ ಎಂಬುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ಭಾರತದಲ್ಲಿ ಅಷ್ಟೇ ಅಲ್ಲ, ಚೀನಾ, ದಕ್ಷಿಣ ಆಫ್ರಿಕಾಗಳಲ್ಲೂ ಇದೇ ಪರಿಸ್ಥಿತಿ ಎದುರಾಗಲಿದೆ. ಕ್ಷಯ ಸಂಬಂಧಿ ರೋಗದಿಂದ ದಕ್ಷಿಣ ಆಫ್ರಿಕಾದಲ್ಲಿ ಸುಮಾರು 13,000 ಮತ್ತು ಚಿನಾದಲ್ಲಿ ಸುಮಾರು 6000 ಜನರು ಮೃತಪಡಬಹುದು ಎಂದು ಹೇಳಿದೆ.
ಕೊವಿಡ್​-19ನಿಂದಾಗಿ ಜನರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುತ್ತಿದ್ದಾರೆ. ಮಾಸ್ಕ್​ಗಳನ್ನು ಧರಿಸುತ್ತಿದ್ದಾರೆ. ಇದರಿಂದಾಗಿ ಕ್ಷಯದ ಪ್ರಸರಣದಲ್ಲಿ ಇಳಿಕೆಯಾಗಲಿದೆ. ಆದರೆ ಚಿಕಿತ್ಸೆಯಲ್ಲಿ ವಿಳಂಬ ಆಗುವ ಸಾಧ್ಯತೆ ಅಧಿಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಒಟ್ಟು ಮೂರು ದೇಶಗಳಿಂದ ಒಟ್ಟು 1,10,000 ಜನರು ಕ್ಷಯದಿಂದ ಸಾಯಬಹುದು. ಕರೊನಾ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಈ ಸಂಖ್ಯೆ 2,00,000ದವರೆಗೂ ಏರಬಹುದು ಎಂದಿದ್ದಾರೆ.
     ಜಾಗತಿಕವಾಗಿ ಇರುವ ಕ್ಷಯ ರೋಗಿಗಳಲ್ಲಿ ಶೇ.40ರಷ್ಟು ರೋಗಿಗಳು ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries