ತಿರುವನಂತಪುರ: ಕೋವಿಡ್ ಅಪಾಯಕಾರಿ ಮಟ್ಟದಲ್ಲಿ ರಾಜ್ಯ ವ್ಯಾಪಕವಾಗಿ ಹಬ್ಬುತ್ತಿರುವುದು ದಿಗಿಲುಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೋವಿಡ್ ರೋಗಿಗಳು ಸತತ ಐದನೇ ದಿನ 100ರ ಗಡಿ ದಾಟಿರುವುದು ಸ್ಥಿತಿಯ ಭವಿಷ್ಯತ್ ಸ್ಥಿತಿಗತಿಗಳನ್ನು ಗಂಭೀರವಾಗಿ ತೋರಿಸುತ್ತಿದೆ ಎಂದರು.
ರೋಗ ಲಕ್ಷಣಗಳಿಲ್ಲದ ಪ್ರಕರಣಗಳೂ ಕೆಲವು ದಿನಗಳಿಂದ ವ್ಯಾಪಕಗೊಳ್ಳುತ್ತಿದೆ. ಜೊತೆಗೆ ರೋಗ ಮೂಲವೂ ಸ್ಪಷ್ಟವಾಗದ ಪ್ರಕರಣಗಳೂ ಹೆಚ್ಚುತ್ತಿದೆ.ಇದು ಗಂಭೀರ ವಿಷಯ ಎಂದು ಅವರು ತಿಳಿಸಿದರು.
ಕೇರಳದಲ್ಲಿ ಅತಿ ಹೆಚ್ಚು ಸೋಂಕು ದೃಢಪಟ್ಟಿದೆ. ನಿನ್ನೆಯ 141 ಸೋಂಕಿತರಲ್ಲಿ 79 ವಿದೇಶಗಳಿಂದ ಮತ್ತು 52 ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 9 ಜನರು ಸೋಂಕಿಗೆ ಒಳಗಾಗಿದ್ದಾರೆ. ಅರವತ್ತೊಂದು ರೋಗಿಗಳಿಗೆ ಕೋವಿಡ್ ರೋಗನಿರ್ಣಯ ನಿನ್ನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿರುವರು.


