ತಿರುವನಂತಪುರಂ: ರಾಜ್ಯದಲ್ಲಿ ಕೊರೋನವೈರಸ್ ಹರಡುವುದನ್ನು ಎದುರಿಸಲು ಪ್ರತಿ ಭಾನುವಾರ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ನಾಳೆ ಇರುವುದಿಲ್ಲ. ಮಿತಿಗೊಳಪಟ್ಟ ಇನ್ನಷ್ಟು ವಿನಾಯ್ತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇತರ ದಿನಗಳಂತೆ, ಈ ಭಾನುವಾರದಂದು ಸಾಮಾನ್ಯ ನಿಬರ್ಂಧ ಇರುತ್ತದೆ.
ವಿವಿಧ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕಿರುವುದರಿಂದ ಭಾನುವಾರದ ಲಾಕ್ ಡೌನ್ ಗೆ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ನಾಳೆಗೆ ಮಾತ್ರ ಸೀಮಿತವಾಗಿದ್ದು ಮುಂದಿನ ಭಾನುವಾರಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಕೋವಿಡ್ -19 ನಿನ್ನೆ ರಾಜ್ಯದಲ್ಲಿ ನಾಲ್ಕನೇ ಬಾರಿ ನೂರರ ಗಡಿ ದಾಟಿದ್ದು 118 ಜನರಲ್ಲಿ ಸೋಂಕು ದೃಢಪಟ್ಟಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಕೋವಿಡ್ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಮಾಹಿತಿ ಲಭ್ಯವಿದೆ.


