ಅಮೃತಸರ: ಪಾಕಿಸ್ತಾನ ಭದ್ರತಾ ಏಜೆನ್ಸಿಗಳಿಂದ ಅಪಹರಿಸಿ, ಕಿರುಕುಳ ಅನುಭವಿಸಿದ್ದ ಇಬ್ಬರು ಸೇರಿದಂತೆ ಐವರು ಭಾರತೀಯ ಹೈ ಕಮೀಷನ್ ಅಧಿಕಾರಿಗಳು ಸೋಮವಾರ ಅಠಾರಿ-ವಾಘಾ ಗಡಿಯ ಮೂಲಕ ಸ್ವದೇಶಕ್ಕೆ ವಾಪಸ್ಸಾದರು.
ಇವರಲ್ಲಿ ಇಬ್ಬರನ್ನು ಜೂನ್ 15 ರಂದು ಅಪಹರಿಸಿದ್ದ ಪಾಕಿಸ್ತಾನದ ಭದ್ರತಾ ಏಜೆನ್ಸಿಗಳು, ಅಕ್ರಮವಾಗಿ 10 ಗಂಟೆಗೂ ಹೆಚ್ಚು ಕಾಲ ಕಸ್ಟಡಿಯಲ್ಲಿಡುವ ಮೂಲಕ ಕಿರುಕುಳ ನೀಡಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈ ವಿಷಯದಲ್ಲಿ ತೀವ್ರ ಪ್ರತಿಭಟನೆ ದಾಖಲಿಸಲು ಪಾಕಿಸ್ತಾನದ ಹೈ ಕಮೀಷನರ್ ಸೈಯದ್ ಹೈದರ್ ಶಾ ಅವರಿಗೆ ಭಾರತ 'ಡಿ ಚಾರ್ಜ್' ಅನ್ವಯ ಸಮನ್ಸ್ ನೀಡಿದೆ.