ಭೋಪಾಲ್: ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಹೇಳಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಸೂಕ್ತ ಮಾಹಿತಿ ಪಡೆಯುವುದು ಜನರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಜಾವಡೇಕರ್ ಅವರು ಭೋಪಾಲ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರವೃತ್ತಿಯ ಬಗ್ಗೆ ಮಾತನಾಡಿದರು. ಸುಳ್ಳು ಸುದ್ದಿಗಳನ್ನು ಕಂಡುಹಿಡಿಯಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ನೊಂದಿಗೆ ವಾಸ್ತವ ಅರಿಯುವ ಘಟಕವನ್ನು ರಚಿಸಿದೆ ಎಂದು ಜಾವಡೇಕರ್ ಹೇಳಿದ್ದಾರೆ. ರಾಜ್ಯಗಳಲ್ಲಿ ಇಂತಹ ವಾಸ್ತವ ಪರಿಶೀಲನೆ ಘಟಕಗಳನ್ನು ರಚಿಸಲಾಗುತ್ತಿದೆ. ಇದರಿಂದ ಜನರಿಗೆ ಸರಿಯಾದ ಮಾಹಿತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಅನರ್ಹರು ಸುದ್ದಿ ಪ್ರಸರಣದಲ್ಲಿ ಜಾಲತಾಣಗಳಲ್ಲಿ ಸಕ್ರಿಯರಾಗುತ್ತಿರುವುದು ಕಳವಳಕಾರಿಯಾದುದಾಗಿದೆ. ಸಾಮೂಹಿಕ ಜಾಲತಾಣಗಳನ್ನು ಬಳಸಿ ಸುದ್ದಿ ಪ್ರಸರಣದಲ್ಲಿ ಕೆಲವು ಅಪಕ್ವ ಮನಸ್ಸುಗಳು ಉತ್ಸುಕವಾಗಿರುವುದನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಗೆ ಅಂತಹ ವ್ಯಕ್ತಿಗಳು ಬಳಿಕ ಪಶ್ಚಾತ್ತಾಪ ಪಡೆಬೇಕಾದೀತೆಂದು ಎಚಚರಿಸಿರುವರು.
ಚೀನಾ ನಡುವಿನ ವಿವಾದ ಮತ್ತು ಕೋವಿಡ್ -19 ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ಕೇಂದ್ರ ಸಚಿವ ಜಾವಡೇಕರ್ ಚರ್ಚಿಸಿದರು.


