ತಿರುವನಂತಪುರ: ಕೇರಳದಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿದ್ದು ಯಾವುದೇ ಕ್ಷಣದಲ್ಲಿ ಸಾಂಕ್ರಾಮಿಕ ರೀತಿಯಲ್ಲಿ ಹರಡಬಹುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಗುರುವಾರ ತಿಳಿಸಿದ್ದಾರೆ. ಮೂಲವನ್ನು ಕಂಡುಹಿಡಿಯಲಾಗದ ಪ್ರಕರಣಗಳು ಹೆಚ್ಚುತ್ತಿವೆ. ತಿರುವನಂತಪುರ ಜಿಲ್ಲೆಯಲ್ಲಿ ಹೆಚ್ಚು ಇಂತಹ ಪ್ರಕರಣಗಳು ಪತ್ತೆಯಾಗುತ್ತಿದೆ. ಎಂದು ಸಚಿವೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಿರುವನಂತಪುರ ನಗರದಲ್ಲಿ ಇತರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೀಘ್ರವಾಗಿ ಏರಿಕೆಯಾಗಿದೆ ಎಂಬ ವರದಿಗಳು ಬಂದಿವೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಲೋಕನಾಥ್ ಬೆಹ್ರಾ ಎಚ್ಚರಿಕೆ ನೀಡಿರುವರು ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ. ಬುಧವಾರ 152 ಸೋಂಕಿತರನ್ನು ಗುರುತಿಸಲಾಗಿತ್ತು. ಸಂಪರ್ಕದಿಂದ ಸೋಂಕು ಹಬ್ಬುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ತಿರುವನಂತಪುರ ಸಹಿತ ಇತರ ಜಿಲ್ಲೆಗಳಲ್ಲೂ ಕೊರೊನಾ ಹೆಚ್ಚುತ್ತಿವೆ. ಇತರ ರಾಜ್ಯಗಳಿಂದ ಕೇರಳಕ್ಕೆ ಬಂದ ಹೆಚ್ಚಿನ ಜನರಲ್ಲಿ ಕೋವಿಡ್ ಖಚಿತಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅನ್ಯರಾಜ್ಯ ಮತ್ತು ವಿದೇಶಗಳಿಂದ ರಾಜ್ಯಕ್ಕೆ ಜನರು ಮರಳಿದಂತೆ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್‍ನಿಂದ ರಕ್ಷಣೆಗಾಗಿ ವಿಶೇಷ ಶಾಖೆ ಹೊರತುಪಡಿಸಿ ಎಲ್ಲ ಪೆÇಲೀಸ್ ಸಿಬ್ಬಂದಿಗಳನ್ನೂ ಕರ್ತವ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ಬೆಟಾಲಿಯನ್ ಎಡಿಜಿಪಿ ಪೆÇಲೀಸ್ ನಿಯೋಜನೆಯ ಉಸ್ತುವಾರಿ ವಹಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಬೆಳಿಗ್ಗೆ ಜಿಲ್ಲಾ ಪೆÇಲೀಸ್ ಮುಖ್ಯಸ್ಥರಿಗೆ ವರದಿ ಸಲ್ಲಿಸಬೇಕಾಗುತ್ತದೆ. ಕ್ವಾರಂಟೈನ್ ಗೊಳಗಾಗಿರುವ ಅಧಿಕಾರಿಗಳನ್ನು ಹೊರತುಪಡಿಸಿ, ಎಲ್ಲರಿಗೂ ಆಯಾ ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಅಡಿಯಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಸಚಿವೆ ಮಾಹಿತಿ ನೀಡಿದರು.
ಹೆಚ್ಚುತ್ತಿರುವ ಸೋಂಕು ಬಾಧಿತರ ಕಾರಣದಿಂದ ಕಠಿಣ ನಿಯಂತ್ರಣಗಳನ್ನು ಮರಳಿ ತರಲಾಗುವುದು ಮತ್ತು ಕಂಟೋನ್ಮೆಂಟ್ ವಲಯಗಳನ್ನು ಒಳಗೊಂಡಂತೆ ಕಠಿಣ ನಿಯಂತ್ರಣಗಳನ್ನು ಜಾರಿಗೆ ತರಲಾಗುವುದು ಎಂದು ಡಿಜಿಪಿ ಲೋಕನಾಥ ಬೆಹ್ರಾ ಕೂಡಾ ತಿಳಿಸಿರುವರು.


