ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 4 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 8 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರಲ್ಲಿ ಎಲ್ಲರೂ ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾದಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕುವೈತ್‍ನಿಂದ ಬಂದಿದ್ದ ಮಡಿಕೈ ಗ್ರಾಮ ಪಂಚಾಯತ್‍ನ 50 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಿವಾಸಿ 47 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನಿವಾಸಿ 47 ವರ್ಷದ ವ್ಯಕ್ತಿ, ಖತಾರ್‍ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 43 ವರ್ಷದ ವ್ಯಕ್ತಿ ಸೋಂಕು ಬಾಧಿತರು.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಬಂದಿದ್ದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 52 ವರ್ಷದ ನಿವಾಸಿ, ಉದಯಗಿರಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಆಗಮಿಸಿದ್ದ ಪೈವಳಿಕೆ ಗ್ರಾಮ ಪಂಚಾಯತ್ ನಿವಾಸಿ 43, 40 ವರ್ಷದ ವ್ಯಕ್ತಿಗಳು, ಮಧೂರು ಗ್ರಾಮ ಪಂಚಾಯತ್ ನಿವಾಸಿ 27 ವರ್ಷದ ವ್ಯಕ್ತಿ, ಮಂಗಲ್ಪಾಡಿ ಗ್ರಾಮ ಪಂಚಾಯತ್ ನಿವಾಸಿ 27 ವರ್ಷದ ವ್ಯಕ್ತಿ, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 44 ವರ್ಷದ ವ್ಯಕ್ತಿ. ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುವೈತ್‍ನಿಂದ ಆಗಮಿಸಿದ್ದ ಕೋಡೋಂ ಬೇಳೂರು ಗ್ರಾಮ ಪಂಚಾಯತ್ ನಿವಾಸಿ 37 ವರ್ಷದ ವ್ಯಕ್ತಿ, ವೆಸ್ಟ್ ಬಂಗಾಳದಿಂದ ಆಗಮಿಸಿದ್ದ ಬೇಡಡ್ಕ ಗ್ರಾಪಂಚಾಯತ್ ನಿವಾಸಿ 31 ವರ್ಷದ ವ್ಯಕ್ತಿ ಕೋವಿಡ್ ನೆಗೆಟಿವ್ ಆದವರು.
ಜಿಲ್ಲೆಯಲ್ಲಿ 5712 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 5320 ಮಂದಿ, ಸಾಂಸ್ಥಿಕ ನಿಗಾದಲ್ಲಿ 392 ಮಂದಿ ಇದ್ದಾರೆ. ನೂತನವಾಗಿ 562 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. ನೂತನವಾಗಿ 275 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 322 ಮಂದಿಯ ಫಲಿತಾಂಶ ಲಭಿಸಿಲ್ಲ. 314 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 123 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಗುರುವಾರ 123 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 53 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರಲ್ಲಿ 84 ಮಂದಿ ವಿದೇಶದಿಂದ ಬಂದವರು. 33 ಮಂದಿ ಇತರ ರಾಜ್ಯಗಳಿಂದ ಬಂದವರು. 6 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಪಾಲ್ಘಾಟ್-24, ಆಲಪ್ಪುಳ-18, ಪತ್ತನಂತಿಟ್ಟ-13, ಕೊಲ್ಲಂ-13, ಎರ್ನಾಕುಳಂ-10, ತೃಶ್ಶೂರು-10, ಕಣ್ಣೂರು-9, ಕಲ್ಲಿಕೋಟೆ-7, ಮಲಪ್ಪುರಂ-6, ಕಾಸರಗೋಡು-4, ಇಡುಕ್ಕಿ-3, ತಿರುವನಂತಪುರ-2, ಕೋಟ್ಟಯಂ-2, ವಯನಾಡು-2 ಎಂಬಂತೆ ರೋಗ ಬಾ„ಸಿದೆ. ಇದು ವರೆಗೆ ರಾಜ್ಯದಲ್ಲಿ 3726 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 1761 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 159616 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 2349 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಉಳಿದವರು ಮನೆಗಳಲ್ಲಿ ಹಾಗು ಇನ್‍ಸ್ಟಿಟ್ಯೂಶನಲ್ ಕೇಂದ್ರಗಳಲ್ಲಿ ಕ್ವಾರೆಂಟೈನ್‍ನಲ್ಲಿದ್ದಾರೆ. ಗುರುವಾರ ಶಂಕಿತ 344 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 156401 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, 4182 ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ. ರಾಜ್ಯದಲ್ಲಿ ಒಟ್ಟು 113 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ್ ಧರಿಸದ 279 ಮಂದಿ ವಿರುದ್ಧ ಕೇಸುಗಳು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 279 ಕೇಸುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8517 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್ ಡೌನ್ ಆದೇಶ ಉಲ್ಲಂಘನೆ : 60 ಕೇಸುಗಳು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 60 ಕೇಸುಗಳನ್ನು ದಾಖಲಿಸಲಾಗಿದೆ. 71 ಮಂದಿಯನ್ನು ಬಂಧಿಸಲಾಗಿದ್ದು, ಮೂರು ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3, ಕುಂಬಳೆ 5, ಕಾಸರಗೋಡು 7, ವಿದ್ಯಾನಗರ 7, ಬದಿಯಡ್ಕ 3, ಬೇಡಗಂ 3, ಆದೂರು 2, ಮೇಲ್ಪರಂಬ 8, ಬೇಕಲ 3, ಅಂಬಲತ್ತರ 1, ಹೊಸದುರ್ಗ 5, ನೀಲೇಶ್ವರ 2, ಚಂದೇರ 3, ಚೀಮೇನಿ 2, ವೆಳ್ಳರಿಕುಂಡ್ 2, ಚಿತ್ತಾರಿಕಲ್ 1, ರಾಜಪುರಂ 3 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2757 ಕೇಸುಗಳನ್ನು ದಾಖಲಿಸಲಾಗಿದೆ. 3469 ಮಂದಿಯನ್ನು ಬಂಧಿಸಲಾಗಿದ್ದು, 1163 ವಾಹನಗಳನ್ನು ವಶಪಡಿಸಲಾಗಿದೆ.


