ಕಾಸರಗೋಡು: ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಸಹಿತ ಜಿಲ್ಲೆಯ ವಿವಿಧ ಗಡಿ ಪ್ರದೇಶಗಳಲ್ಲಿ ಮುಚ್ಚಲ್ಪಟ್ಟಿರುವ ಅಂತರಾಜ್ಯ ರಸ್ತೆಗಳನ್ನು ಸದ್ಯ ತೆರೆಯಲಾಗುವುದಿಲ್ಲ ಎಂದು ಗುರುವಾರ ನಡೆದ ಜಿಲ್ಲಾ ಮಟ್ಟದ ಕರೋನಾ ಕೋರ್ ಸಮಿತಿ ಸಭೆಯುಲ್ಲಿ ಮಹತ್ವದ ತೀರ್ಮಾನವೊಂದು ಹೊರಬಿದ್ದಿದೆ.
ಎಣ್ಮಕಜೆ, ವರ್ಕಾಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗಳು ಮುಚ್ಚಲ್ಪಟ್ಟ ಗಡಿಗಳನ್ನು ತೆರೆದು ಬಿಡುವಂತೆ ಸಲ್ಲಿಸಿದ ಅರ್ಜಿಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಸರ್ಕಾರದ ನಿರ್ಧಾರದಂತೆ ಜಿಲ್ಲೆಗೆ ತಲಪಾಡಿ ಗಡಿಯ ಮೂಲಕ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಎಲ್ಲಾ ರಸ್ತೆಗಳಲ್ಲಿ ಚೆಕ್ ಪೆÇೀಸ್ಟ್ ಸ್ಥಾಪಿಸಲು ಪೆÇಲೀಸ್ ಮತ್ತು ಆರೋಗ್ಯ ಇಲಾಖೆಗೆ ಸಮರ್ಪಕ ಸಿಬ್ಬಂದಿ ಇಲ್ಲದಿರುವುದರಿಂದ, ಸರ್ಕಾರದ ನಿರ್ಧಾರದಿಂದ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಿಂದ ಕಣ್ಣೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆತರಲು ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ವ್ಯವಸ್ಥೆಗೊಳಿಸಲಾಗುವುದು. ಸ್ವಂತ ವಾಹನಗಳಿಲ್ಲದವರಿಗೆ ಈ ಎರಡು ಬಸ್ ಗಳ ಮೂಲಕ ಕರೆತರುವ ವ್ಯವಸ್ಥೆ ಇರಲಿದೆ. ವಿಮಾನ ನಿಲ್ದಾಣದ ಸಂಪರ್ಕ ಅಧಿಕಾರಿಗಳು ವಿದೇಶದಿಂದ ಆಗಮಿಸುವವರ ವಿವರಗಳನ್ನು ಪ್ರತ್ಯೇಕ ದಾಖಲೆಗಳ ಮೂಲಕ ಸಂಬಂಧಪಟ್ಟ ಕೋವಿಡ್ ನಿಯಂತ್ರಣ ಅಧಿಕಾರಿಗಳಿಗೆ ವಾಟ್ಸ್ ಆಫ್ ಮೂಲಕ ರವಾನಿಸುವರು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿರುವರು.


