ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಪೇರ್ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಕುಳದಪಾರೆಯಲ್ಲಿ ಮರಗೆಣಸಿನ ಕೃಷಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಸಿಪಿಎಂ ಪಕ್ಷದ ಬೆಳ್ಳೂರು ಲೋಕಲ್ ಸಮಿತಿ ಕಾರ್ಯದರ್ಶಿ ಸೂಫಿ ಕೆ. ಗೆಣಸು ಕೃಷಿಗೆ ಚಾಲನೆ ನೀಡಿ ಉದ್ಘಾಟಿಸಿದರು. ಬ್ಯಾಂಕ್ ಆಡಳಿತ ಸಮಿತಿ ಸದಸ್ಯರಾದ ಟಿ.ಎನ್.ದಿವಾಕರ, ದಾಮೋದರ ಎಲ್.ಎ.ಕಾರ್ಯದರ್ಶಿ ಕೆ.ರತೀಶ್, ಹರಿಹರನ್ ಸಿ.ಕೆ. ಮೊದಲಾದವರು ಉಪಸ್ಥಿತರಿದ್ದರು.


