ನವದೆಹಲಿ: ಭಾರತದಲ್ಲಿ ಶೀಘ್ರವೇ ವೈರಸ್ ಸೋಂಕಿಗೆ ಪರಿಣಾಮಕಾರಿ ಔಷಧಿ ಉತ್ಪಾದನೆ ಪ್ರಾರಂಭವಾಗಲಿದೆ. ಕೋವಿಡ್ 19 ರೋಗಿಗಳ ಮೇಲೆ "ನಿಬರ್ಂಧಿತ ತುರ್ತು ಬಳಕೆ" ಗಾಗಿ ಈ ಔಷಧಿಗಳನ್ನು ಬಳಕೆ ಮಾಡಬಹುದಾಗಿದೆ. ಈ ಔಷಧಿಯು ರೋಗಿಗಳ ಮೇಲೆ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸ್ಥಿರ ಪರಿಣಾಮವನ್ನುಂಟುಮಾಡುತ್ತದೆ. ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ತೀವ್ರವಾಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಕೊರೋನಾ ರೋಗಿಗಳ ಮೇಲೆ "ನಿಬರ್ಂಧಿತ ತುರ್ತು ಬಳಕೆ" ಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಔಷಧಿಗಳ ಪ್ರಯೋಗಕ್ಕೆ ಅನುಮತಿಸಿದೆ.
ದೇಶದ ಉನ್ನತ ಔಷಧ ನಿಯಂತ್ರಕ ಸಂಸ್ಥೆ ಭಾರತದಲ್ಲಿ ಆಂಟಿ-ವೈರಲ್ ಔಷದಿಗಳ ಉತ್ಪಾದನೆಗೆ ಮತ್ತು ಮಾರಾಟ ಮಾಡಲು ಅನುಮೋದನೆ ಪಡೆಯಲು ಬಯಸುವ ನಾಲ್ಕು ದೇಶೀಯ ಫಾರ್ಮಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಮೌಲ್ಯಮಾಪನ ಮಾಡುತ್ತಿದೆ. "ಅವರ ಅರ್ಜಿಗಳನ್ನು ಹಗಲು-ರಾತ್ರಿ ಕೂಲಂಕಷವಾಗಿ ಅಧ್ಯಯನ ಮಾಡಲಾಗುತ್ತಿದೆ ಅದಕ್ಕೆ ಸಂಬಂಧಿಸಿದ ನ್ಯೂನತೆಗಳ ಸಂಬಂಧ ಆಯಾ ಫಾರ್ಮಾ ಕಂಪನಿಗಳು ತಮ್ಮ ವರದಿಯನ್ನು ನೀಡುತ್ತಿವೆ. ಔಷಧದ ಆಣ್ವಿಕ ಸಂಯುಕ್ತದ ಪರೀಕ್ಷೆಯನ್ನು ನಮ್ಮ ಸರ್ಕಾರಿ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಇದು ಸುರಕ್ಷತಾ ನಿಯತಾಂಕಗಳನ್ನು ಕಂಡುಕೊಂಡಾಗ ಕೋವಿಡ್ -19 ರೋಗಿಗಳ ಮೇಲೆ 'ನಿಬರ್ಂಧಿತ ತುರ್ತು ಬಳಕೆ'ಗೆಇವನ್ನು ಬಳಕೆ ಮಾಡಲಾಗುತ್ತದೆ. ಭಾರತವು ತನ್ನ ದೇಶೀಯ ಉತ್ಪನ್ನದ (ರೆಮ್‍ಡೆಸಿವಿರ್) ಪ್ರಯೋಜನವನ್ನು ಶೀಘ್ರದಲ್ಲೇ ಪಡೆಯಲಿದೆ "ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಎನ್‍ಐಗೆ ತಿಳಿಸಿದರು.
ರೆಮ್ ಡೆಸಿವಿರ್ ಕೇವಲ ಒಂದು ಔಷಧವಾಗಿದೆ. ಆದ್ದರಿಂದ ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಗಮನಿಸಿದರೆ ರೋಗಿಗಳ ಮೇಲೆ 'ನಿಬರ್ಂಧಿತ ತುರ್ತು ಬಳಕೆ'ಗೆ ಅನುಮತಿ ನೀಡಬಹುದಾಗಿದೆ. ಆದರೆ ಇದಕ್ಕಾಗಿ ವೈದ್ಯರು ಎಕ್ಸೆಪ್ಟ್ ಫಾರ್ಮ್ (ಒಪ್ಪಿಗೆ ಪತ್ರ)ವನ್ನು ಭರ್ತಿ ಮಾಡಬೇಕು. ಅವರು ಹೇಳಿದರು, ಇದು ಭಾರತದ ಮೊದಲ ಔಷಧವಾಗಿರಲಿದೆ.
ಔಷಧಿಗಳನ್ನು ಡೋಸ್ ರೂಪದಲ್ಲಿ ಸೋಂಕಿತರಿಗೆ ನೀಡಲಾಗುವುದು. ಮೊದಲ ದಿನ, ರೋಗಿಗೆ ಎರಡು ಡೋಸ್‍ಗಳನ್ನು ನೀಡಲಾಗುತ್ತದೆ ಮತ್ತು ಮುಂದಿನ ನಾಲ್ಕು ದಿನಗಳವರೆಗೆ ವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಒಂದು ಡೋಸ್ ನೀಡಲಾಗುತ್ತದೆ. ಆಕ್ಸಿಜನ್ ಸ್ಯಾಚುರೇಶನ್ ಮಟ್ಟ 94 ಕ್ಕಿಂತ ಕಡಿಮೆ ಮತ್ತು ಉಸಿರಾಟದ ಪ್ರಮಾಣ 24 ಕ್ಕಿಂತ ಹೆಚ್ಚಿರುವ ತೀವ್ರ ಸ್ವರೂಪದ ಕೋವಿಡ್ ರೋಗಿಗಳಿಗೆ ಮಾತ್ರ ಈ ಔಷಧಿ ಬಳಕೆ ಮಾಡಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿ ಹೇಳಿದರು.


